ADVERTISEMENT

ಅಫೀಮು ಮಾರಾಟ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 14:42 IST
Last Updated 2 ಏಪ್ರಿಲ್ 2021, 14:42 IST
ಬಂಧಿತ ಆರೋಪಿಗಳನ್ನು ಅವರ ನಿವಾಸದಿಂದ ಕರೆದೊಯ್ಯುತ್ತಿರುವ ಪೊಲೀಸರು
ಬಂಧಿತ ಆರೋಪಿಗಳನ್ನು ಅವರ ನಿವಾಸದಿಂದ ಕರೆದೊಯ್ಯುತ್ತಿರುವ ಪೊಲೀಸರು   

ಚಿಕ್ಕಬಳ್ಳಾಪುರ: ನಗರದಲ್ಲಿ ಅಫೀಮು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರಾಜಸ್ಥಾನ ಮೂಲದ ರಾಣಾ ಸಿಂಗ್ ಮತ್ತು ಜೋಧ್ ಸಿಂಗ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಗರದ 23ನೇ ವಾರ್ಡ್‌ನ ಚಾಮರಾಜಪೇಟೆಯ ಅವರ ಬಾಡಿಗೆ ನಿವಾಸದ ಮೇಲೆ ಡಿವೈಎಸ್‌ಪಿ ರವಿಶಂಕರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಬಂಧಿತರಿಂದ 360 ಗ್ರಾಂ ಅಫೀಮು ವಶಪಡಿಸಿಕೊಂಡಿದ್ದಾರೆ.

‘2003ರಿಂದ ಆರೋಪಿಗಳು ಚಿಕ್ಕಬಳ್ಳಾಪುರದಲ್ಲಿ ವಾಸಿಸುತ್ತಿದ್ದಾರೆ. ಪ್ಲಾಸ್ಟಿಕ್, ಬಟ್ಟೆ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ರವಿಶಂಕರ್ ತಿಳಿಸಿದರು.

ADVERTISEMENT

ಆರೋಪಿಗಳ ಮನೆಗೆ ನಿತ್ಯವೂ ಆರೇಳು ಮಂದಿ ಬರುತ್ತಿದ್ದರು. ಇವರು ಕಾಯಂ ಗ್ರಾಹಕರು ಎನಿಸುತ್ತದೆ. ಈ ದಾಳಿ ನಡೆದ ನಂತರವೇ ನಮಗೆ ಇವರು ಈ ಕೃತ್ಯ ನಡೆಸುತ್ತಿದ್ದಾರೆ ಎನ್ನುವುದು ತಿಳಿಯಿತು ಎಂದು ನೆರೆಹೊರೆಯವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.