ADVERTISEMENT

ಮುಮ್ಮನಹಳ್ಳಿ: ಸಮರ್ಪಕ ನೀರು ಪೂರೈಕೆಗೆ ಒತ್ತಾಯ

16 ತಿಂಗಳಿನಿಂದ ವಾಟರ್‌ಮನ್‌ ವೇತನ ಬಾಕಿ: ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:21 IST
Last Updated 6 ಜೂನ್ 2020, 9:21 IST
ಮುಮ್ಮನಹಳ್ಳಿ ಗ್ರಾಮಸ್ಥರು ಪಲಿಚೇರ್ಲು ಗ್ರಾಮ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು
ಮುಮ್ಮನಹಳ್ಳಿ ಗ್ರಾಮಸ್ಥರು ಪಲಿಚೇರ್ಲು ಗ್ರಾಮ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು   

ಸಾದಲಿ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿಪಲಿಚೇರ್ಲು ಗ್ರಾಮ ಪಂಚಾಯಿತಿಯ ಮುಮ್ಮನಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಮುಮ್ಮನಹಳ್ಳಿಯ ವಾಟರ್‌ಮೆನ್‌ ವೆಂಕಟೇಶ್ ಅವರಿಗೆ 16 ತಿಂಗಳಿನಿಂದಲೂ ಸಂಬಳ ಬಾಕಿ ಇದೆ. ಹಾಗಾಗಿ ಅವರ ನೀರು ಬಿಡುವುದನ್ನು ನಿಲ್ಲಿಸಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದರು.

ನೀರು ಬಿಡುವಂತೆ ಗ್ರಾಮಸ್ಥರು ಕೇಳಿದ್ದು ‘ಸಂಬಳ ಕೊಡಿಸಿ ಅದುವರೆಗೆ ನೀರು ಬಿಡುವುದಿಲ್ಲ’ ಎಂದಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.

ADVERTISEMENT

ಪಂಚಾಯಿತಿ ಅಧ್ಯಕ್ಷ ಗೋಪಿನಾಥ್ ಹಾಗೂ ಪಿಡಿಒ ಕಾತ್ಯಾಯಿನಿ ಪ್ರತಿಕ್ರಿಯಿಸಿ, ಜಲಗಂಟಿಗೆ ವೇತನ ನೀಡಲಾಗುವುದು. ಸಮರ್ಪಕವಾಗಿ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ನರಸಪ್ಪ, ಸುಬ್ಬಾರೆಡ್ಡಿ, ನರಸರೆಡ್ಡಿ, ಗಂಗಪ್ಪ, ವೆಂಕಟೇಶ್‍ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.