ಗುಡಿಬಂಡೆ: ಕಳೆದ ಎರಡು ದಿನಗಳಿಂದ ಬಿರುಗಾಳಿ ಸಹಿತ ಸುರಿದ ಅಪಾರ ಮಳೆಗೆ ಗುಡಿಬಂಡೆ ತಾಲ್ಲೂಕಿನ ನಿಚ್ಚನಬಂಡಹಳ್ಳಿಯಲ್ಲಿ ಕಟಾವಿಗೆ ಬಂದಿದ್ದ ಒಂದು ಎಕರೆ ಚೆಂಡು ಹೂವು ಬೆಳೆ ನೆಲಕಚ್ಚಿದೆ.
ಈಚೆಗೆ ಸುರಿದ ಮಳೆಗೆ ಕೆಲ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಹೂ ಬೆಳೆಗಾರರು ಕಣ್ಣೀರು ಸುರಿಸುವಂತಾಗಿದೆ. ಶುಕ್ರವಾರ ಶನಿವಾರ, ಭಾನುವಾರ ಸುರಿದ ಬಿರುಗಾಳಿ ಸಮೇತ ಮಳೆಗೆ ರೈತರ ಬೆಳೆ ನಾಶವಾಗಿ ಅಪಾರ ನಷ್ಟ ಉಂಟಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ ₹70ರಿಂದ 100 ದರವಿದೆ. 1ಎಕರೆಯಲ್ಲಿ ₹2-3ಲಕ್ಷಕ್ಕೂ ಅಧಿಕ ಆದಾಯದ ನಿರೀಕ್ಷೆ ಇತ್ತು. ಆದರೆ, ಎಲ್ಲವೂ ನಷ್ಟವುಂಟಾಗಿದೆ ಎಂದು ನಿಚ್ಚನಬಂಡಹಳ್ಳಿ ರೈತ ವೆಂಕಟರಾಯಪ್ಪ ರೈತ ಅಳಲು ತೋಡಿಕೊಂಡರು.
ಸರ್ಕಾರ ಬೆಳೆ ನಷ್ಟ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಮುಖಂಡ ರವಿಕುಮಾರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.