ಶಿಡ್ಲಘಟ್ಟ: ನಗರದ ವಿವಿಧೆಡೆ ಕಾರ್ಯಾಚರಣೆ ಕೈಗೊಂಡ ತಾಲ್ಲೂಕು ಕಚೇರಿಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕರ ತಂಡವು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಗೃಹ ಉಪಯೋಗಿ ಅಡುಗೆ ಸಿಲಿಂಡರ್‌ಗಳನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.
ನಗರದ ವಿವಿಧೆಡೆ ಹೋಟೆಲ್, ಕಾಫಿ, ಟೀ ಅಂಗಡಿ ಸೇರಿದಂತೆ ಇತರ ಕಡೆಗಳಲ್ಲಿ ಕಡೆ ದಿಢೀರ್ ದಾಳಿ ನಡೆಸಿದ ಆಹಾರ ನಿರೀಕ್ಷಕ ಪ್ರಕಾಶ್, ವೆಂಕಟಲಕ್ಷ್ಮಮ್ಮ ಅವರ ತಂಡವು ಒಟ್ಟು 13 ಗೃಹ ಉಪಯೋಗಿ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗೃಹ ಉಪಯೋಗಕ್ಕೆ ಪಡೆದ ಸಿಲಿಂಡರ್‌ಗಳನ್ನು ಹೋಟೆಲ್, ಟೀ ಅಂಗಡಿಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ವಶಕ್ಕೆ ಪಡೆದ ಸಿಲಿಂಡರ್‌ಗಳ ಪೈಕಿ ಒಂದು ಸಿಲಿಂಡರ್ ಇನ್ನೂ ಬಳಕೆಯೇ ಆಗಿರಲಿಲ್ಲ. ಇನ್ನುಳಿದ 12 ಸಿಲಿಂಡರ್‌ಗಳನ್ನು ಒಂದಷ್ಟು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಕ್ಕೆ ಪಡೆದ ಸಿಲಿಂಡರ್‌ಗಳನ್ನು ತನಿಖಾ ವರದಿಯೊಂದಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ.
ಸಂಬಂಧಿಸಿದವರಿಗೆ ನೋಟಿಸ್ ನೀಡಿ ವಿವರ ಪಡೆಯಲಾಗುತ್ತದೆ. ವಾಣಿಜ್ಯ ಬಳಕೆಗೆಂದು ಸಿಲಿಂಡರ್‌ಗಳನ್ನು ಪಡೆದ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಸಿಲಿಂಡರ್ ವಾಪಸ್ ನೀಡಲಾಗುವುದು. ಇಲ್ಲವಾದಲ್ಲಿ ಸಿಲಿಂಡರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.