
ಚಿಂತಾಮಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳಂಕರಹಿತ ಮತ್ತು ಯಾರಿಗೂ ಸರಿಸಾಟಿ ಇಲ್ಲದ ನಾಯಕರಾಗಿದ್ದು, ನಿರಂತರವಾಗಿ ಬಡವರಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
ಸಿದ್ದರಾಮಯ್ಯ ಅವರು ದೀರ್ಘಕಾಲ ಮುಖ್ಯಮಂತ್ರಿ ದಾಖಲೆ ಮಾಡಿದ ಹಿನ್ನೆಲೆಯಲ್ಲಿ ಕುರುಬರ ಸಂಘವು ಭಾನುವಾರ ನಗರದಲ್ಲಿ ಐತಿಹಾಸಿಕ ವಿಜಯೋತ್ಸವ ಮತ್ತು ಸ್ನೇಹಮಿಲನ ಕಾರ್ಯಕ್ರಮ ಹಮ್ಮಿಕೊಂಡಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿ ಹಲವಾರು ಸಂಕಷ್ಟಗಳನ್ನು ಎದುರಿಸಿ, ರಾಜಕೀಯ ಏಳುಬೀಳುಗಳ ನಡುವೆ ಈ ಸಾಧನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜೀವನದ ಅನುಭವಗಳು ಕಲಿಸಿದ ಪಾಠದಿಂದಲೇ ಬಡವರಿಗೆ ಸ್ಪಂದಿಸುವುದನ್ನು ಕರಗತ ಮಾಡಿಕೊಂಡರು ಎಂದರು.
ಕಳಂಕರಹಿತ ರಾಜಕಾರಣಿಯಾಗಿದ್ದರೂ ವಿರೋಧಪಕ್ಷಗಳು ಅವರ ಆತ್ಮವಿಶ್ವಾಸ ಕುಂದಿಸುವ ಮತ್ತು ಮನ ನೋಯಿಸುವ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮುನಿಶಾಮಿರೆಡ್ಡಿ, ಕುರುಬರ ಸಂಘದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ವೆಂಕಟರವಣಪ್ಪ, ಎಂ.ಎ.ಪ್ರಕಾಶ್ ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.