
ಪ್ರಜಾವಾಣಿ ವಾರ್ತೆ
ಶಿಡ್ಲಘಟ್ಟ: ನಗರದ ಒಂದನೇ ವಾರ್ಡ್‌ನ ಅಂಜನಿ ಬಡಾವಣೆಯಲ್ಲಿ ಆಟೊಮೊಬೈಲ್ ಅಂಗಡಿಯಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗುರುವಾರ ಪೊಲೀಸರು ದಾಳಿ ನಡೆಸಿದರು. ಈ ಪ್ರಕರಣ ಸಂಬಂಧ ಗೋಪಾಲ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಬ್ ಇನ್‌ಸ್ಪೆಕ್ಟರ್ ವೇಣುಗೋಪಾಲ್ ತಿಳಿಸಿದರು.
ಇಂಡೇನ್ ಕಂಪನಿಯ 4 ಖಾಲಿ ಸಿಲಿಂಡರ್‌ಗಳು, 16 ಗ್ಯಾಸ್ ತುಂಬಿರುವ ಸಿಲಿಂಡರ್‌ಗಳು, 4 ಭಾರತ್ ಕಂಪನಿಯ ಸಿಲಿಂಡರ್‌ಗಳು, ಒಂದು ತೂಕದ ಯಂತ್ರ, ಒಂದು ಗ್ಯಾಸ್ ಫಿಲ್ಲಿಂಗ್ ಮೋಟರ್, ಒಂದು ಗ್ಯಾಸ್ ಕನೆಕ್ಟಿಂಗ್ ಪೈಪ್, 2 ಚಿಕ್ಕ ಖಾಲಿ ಸಿಲಿಂಡರ್‌ಗಳನ್ನು ಮತ್ತು ಒಂದು ಆಟೊ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.