
ಬೀದಿನಾಯಿ
ಬಾಗೇಪಲ್ಲಿ: ಪಟ್ಟಣದಲ್ಲಿ ಬೀದಿನಾಯಿಗಳ ಹಿಂಡು ಹೆಚ್ಚಾಗಿದ್ದು, 5ನೇ ವಾರ್ಡ್ ಸೇರಿದಂತೆ ವಿವಿಧ ಕಡೆಗಳಲ್ಲಿ 24 ಮಂದಿ ಬಾಲಕರಿಗೆ, ಹಿರಿಯರಿಗೆ ಬೀದಿನಾಯಿಗಳು ಘಟನೆ ಬುಧವಾರ ಕಚ್ಚಿದೆ.
ಪಟ್ಟಣದ ಡಾ.ಎಚ್.ಎನ್.ವೃತ್ತ ಸೇರಿದಂತೆ ಗೂಳೂರು, ಕೊತ್ತಪಲ್ಲಿ, ಸಂತೆಮೈದಾನ, ಕುಂಬಾರಪೇಟೆ, ಆವುಲಮಂದೆ, ಪೊಲೀಸ್ ಹಾಗೂ ಆರೋಗ್ಯ ವಸತಿ ಗೃಹಗಳು ಸೇರಿದಂತೆ 23 ವಾರ್ಡ್‍ಗಳ ರಸ್ತೆಗಳಲ್ಲಿ ಬೀದಿನಾಯಿಗಳ ಹಿಂಡು ಹೆಚ್ಚಾಗಿದೆ. ರಸ್ತೆಗಳ ಹಾಗೂ ಮನೆಗಳ ಮುಂದೆ ಬಿಸಾಡಿದ ಅನ್ನ, ಮಾಂಸದ ಮೂಳೆಗಳಿಗೆ ಬೀದಿನಾಯಿಗಳು ಕಚ್ಚಾಡಿಕೊಂಡು ರಸ್ತೆಗಳಲ್ಲಿ ಸಂಚರಿಸುವ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ, ಮಹಿಳೆಯರ, ಜನರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ.
ಗೂಳೂರು ರಸ್ತೆಯ 5ನೇ ವಾರ್ಡ್‍ನಲ್ಲಿ ಬುಧವಾರ ಬೀದಿನಾಯಿಗಳು ರಸ್ತೆಯಲ್ಲಿ ಸಂಚರಿಸುವ 24 ಜನರ ಮೇಲೆ ದಾಳಿ ಮಾಡಿವೆ. ಕೈ, ಕಾಲುಗಳಿಗೆ ಕಚ್ಚಿವೆ. ನಾಯಿಗಳು ಕಚ್ಚಿದ ಜನರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ, ನಾಯಿ ಕಡಿತದ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ.
ಪಟ್ಟಣದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಳವಾಗಿವೆ. ನಾಯಿಗಳ ಕಡಿವಾಣಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಪಟ್ಟಣದ ನಿವಾಸಿ ಸಾಯಿಜ್ಯೋತಿ ತಿಳಿಸಿದರು.
ಪಟ್ಟಣದಲ್ಲಿ ಬೀದಿನಾಯಿಗಳ ತಡೆಯಬೇಕು ಎಂದು ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿದೆ. ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿಲ್ಲ. ಇದೀಗ ನಾಯಿಗಳು ಜನರಿಗೆ ಕಚ್ಚಿರುವ ಘಟನೆ ನಡೆದಿದೆ. ಬೀದಿನಾಯಿಗಳನ್ನು ತಡೆಯಬೇಕು. ಇಲ್ಲವಾದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಪುರಸಭಾ ಮಾಜಿ ಸದಸ್ಯ, ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಕಾರ್ಯದರ್ಶಿ ಜಿ.ಕೃಷ್ಣಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.