ADVERTISEMENT

ಪ್ರತಿಭಾ ಪುರಸ್ಕಾರ, ಸನ್ಮಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 4:10 IST
Last Updated 22 ಫೆಬ್ರುವರಿ 2021, 4:10 IST
ಕುರೂಡಿಯಲ್ಲಿ ಆಯೋಜಿಸಿದ್ದ ‌ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು
ಕುರೂಡಿಯಲ್ಲಿ ಆಯೋಜಿಸಿದ್ದ ‌ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು   

ಗೌರಿಬಿದನೂರು: ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಆಸಕ್ತಿಯಿಂದ ಕಲಿಕೆಯ ಜತೆಗೆ ಬದುಕಿಗೆ ಆಸರೆಯಾಗುವ ಸ್ಪರ್ಧಾತ್ಮಕ ಜ್ಞಾನವನ್ನು ಪಡೆದು ಉನ್ನತ ಮಟ್ಟದ ಶಿಕ್ಷಣ ಪಡೆದು ಸಮುದಾಯದ ಏಳಿಗೆಗೆ ಸಹಕಾರಿಯಾಗಬೇಕಿದೆ ಎಂದು ಜಿ.ಪಂ ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ತಿಳಿಸಿದರು.

ಕುರೂಡಿಯಲ್ಲಿ ನಂದಗೋಕುಲ ಯಾದವ ಸಂಘದ ವತಿಯಿಂದ ಆಯೋಜಿಸಿದ್ದ 2019-20 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ತಾಲ್ಲೂಕಿನ ಬಹುತೇಕ ಗ್ರಾಮದಲ್ಲಿ ಸಮುದಾಯದವರು ವಾಸವಾಗಿದ್ದು, ಇವರೆಲ್ಲ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಲು ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ‌. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯಾದವ ಯುವ ನಾಯಕರು ಕಾರ್ಯ ನಿರ್ವಹಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮುದಾಯದ ವಿದ್ಯಾರ್ಥಿಗಳು ಮತ್ತು ಜನತೆಗೆ ದೊರೆಯುವಂತೆ ಸಹಕಾರ ನೀಡಿ ಅವರ ಬದುಕಿಗೆ ಆಸರೆಯಾಗಬೇಕಿದೆ ಎಂದು‌ ಹೇಳಿದರು.

ADVERTISEMENT

ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷರಾದ ಸುಧಾಕರ್ ಮಾತನಾಡಿ, ಸಮುದಾಯವು ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿಯಾಗಬೇಕಾದರೆ ಯಾದವ ಯುವಕರ ಜವಾಬ್ದಾರಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಮತ್ತು ಸಹಕಾರದೊಂದಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ‌ಕಾರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ. ಇದರಿಂದ ಇಡೀ ಸಮಾಜದಲ್ಲಿ ಯಾದವ ಸಮುದಾಯದ ಪಾತ್ರ ಮತ್ತು ಗೌರವ ಹೆಚ್ಚಾಗುತ್ತದೆ ಎಂದು‌ ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ‌ಕಲಾ ತಂಡಗಳೊಂದಿಗೆ ಶ್ರೀಕೃಷ್ಣ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ಸಮುದಾಯದ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ತಾಲ್ಲೂಕು‌ ಘಟಕದ ಅಧ್ಯಕ್ಷ ವೈ.ಆರ್.ಅಂಬರೀಶ್, ಮುಖಂಡರಾದ ಟಿ.ಪಿ.ರಾಮಯ್ಯ, ಬಿ.ಪಿ. ಅಶ್ವತ್ಥನಾರಾಯಣಗೌಡ, ಬಿ.ಕೆ.ನಾರಾಯಣಸ್ವಾಮಿ, ಆರ್.ಮುನಿಲಕ್ಷ್ಮಮ್ಮ, ಹರಿಕೃಷ್ಣಯಾದವ್, ನವೀನ್ ಯಾದವ್, ಚಂದ್ರಶೇಖರ್, ಬೆಟ್ಟಸ್ವಾಮಿ, ರಾಮಚಂದ್ರ, ಸಿ.ಡಿ.ನರಸಿಂಹಮೂರ್ತಿ, ಸಿದ್ದಗಂಗಪ್ಪ, ಎನ್‌.ಬಾಲಪ್ಪ, ಸುನೀಲ್, ಮೋಹನ್ ಕುಮಾರ್, ಈರಣ್ಣ, ಮುನಿಕೃಷ್ಣ, ಎಂ.ಕೆ‌.ನಾರಾಯಣಪ್ಪ, ಯರ್ರಗುಂಟೆ ಕೃಷ್ಣ, ಮುತ್ತೇಗೌಡ, ಪ್ರಕಾಶ್, ವಿಶ್ವನಾಥ್, ನರಸಿಂಹಮೂರ್ತಿ, ಶಿವಕುಮಾರ್, ಜಯಪ್ರಕಾಶ್, ನಾರಾಯಣಪ್ಪ, ರಾಜೇಶ್ವರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.