ADVERTISEMENT

ಚಿಂತಾಮಣಿ: ಮುರುಗಮಲ್ಲ ದರ್ಗಾಗೆ ತೆಲುಗು ನಟ ಅಲಿ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 6:31 IST
Last Updated 13 ಜನವರಿ 2022, 6:31 IST
ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ದರ್ಗಾಗೆ ಬುಧವಾರ ಭೇಟಿ ನೀಡಿದ್ದ ತೆಲುಗು ಚಿತ್ರರಂಗದ ನಟ ಅಲಿ
ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ದರ್ಗಾಗೆ ಬುಧವಾರ ಭೇಟಿ ನೀಡಿದ್ದ ತೆಲುಗು ಚಿತ್ರರಂಗದ ನಟ ಅಲಿ   

ಚಿಂತಾಮಣಿ: ಹಿಂದು-ಮುಸ್ಲಿಂ ಭಾವೈಕ್ಯ ಕೇಂದ್ರ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ತೆಲುಗು ಚಿತ್ರ ರಂಗದ ಹಾಸ್ಯ ನಟ ಅಲಿ ಮತ್ತು ಪತ್ನಿ ಜುಬೇದಾ ಬುಧವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ದರ್ಗಾದ ಮೌಲ್ವಿಗಳು ಹಾಸ್ಯ ನಟ ಅಲಿ ಮತ್ತು ಅವರ ಕುಟುಂಬವನ್ನು ದರ್ಗಾಗೆ ಸ್ವಾಗತಿಸಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗೆ ಅವಕಾಶ ಮಾಡಿದ್ದರು.ಕೆಂಚಾರ್ಲಹಳ್ಳಿ ಠಾಣೆಯ ಸಬ್ ಇನ್ಸ್ ಸ್ಪೆಕ್ಟರ್ ನಾರಾಯಣಪ್ಪ ಮತ್ತು ಸಿಬ್ಬಂದಿ ಸೂಕ್ತ ಬಂದೋ ಬಸ್ತ್ ಏರ್ಪಡಿಸಿದ್ದರು.

ಆಂಧ್ರ ಪ್ರದೇಶದ ಗಡಿ ಭಾಗವಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಸಮೀಪ ಚಿತ್ರೀಕರಣಕ್ಕೆ ಆಗಮಿಸಿದ್ದು ದರ್ಗಾದ ಮಹತ್ವದ ಕುರಿತು ಗೊತ್ತಾಯಿತು. ಹೀಗಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಪೂಜೆಸಲ್ಲಿಸಲು ಭೇಟಿ ನೀಡಿದ್ದೆ ಎಂದು ಅಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.