ಶಿಡ್ಲಘಟ್ಟ: ನವರಾತ್ರಿ ಸಂದರ್ಭದಲ್ಲಿ ಹಳ್ಳಿಗಳಲ್ಲಿ ದೇವತಾಕಾರ್ಯ ಮಾಡುವ ಮೂಲಕ ದೈವಿಕ ಕಾರ್ಯಗಳಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಚೊಕ್ಕಂಡಹಳ್ಳಿ ಗ್ರಾಮದಲ್ಲಿ ಪುನರ್ ಪ್ರತಿಷ್ಟಾಪನೆಗೊಂಡಿರುವ ಗಂಗಾದೇವಿ ದೇವಾಲಯದಲ್ಲಿ ಆಯೋಜಿಸಿದ್ದ ಚಂಡಿಕಾಹೋಮ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೊಡ್ಡಚೊಕ್ಕಂಡಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾದೂರು ರಘು, ಸಿ.ವಿ.ನಾರಾಯಣಸ್ವಾಮಿ, ಶ್ರೀನಿವಾಸ್, ನಾಗೇಶ್ ಬಾಬು, ಸಿ.ವಿ.ದೇವರಾಜ್, ಬಿ.ಎಂ.ರಾಜಣ್ಣ, ಸಿ.ಮಂಜುನಾಥ್, ಆಂಜಿನಪ್ಪ, ರವಿಕುಮಾರ್, ಮಂಜುನಾಥ್, ರಾಮಚಂದ್ರಪ್ಪ, ಮಾರೇಗೌಡ, ಮುನಿಕೃಷ್ಣ, ಗಂಗರೆಡ್ಡಿ, ಕೆಂಪಣ್ಣ, ಮಧುಕುಮಾರ್, ತಿಮ್ಮರಾಯಪ್ಪ, ಎಚ್.ಎಂ.ಮುರಳಿ, ಅಂಬರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.