ADVERTISEMENT

ಕೇಂದ್ರದ ವಿರುದ್ಧ ಹೋರಾಟ: ಗುಡಿಬಂಡೆ ತಾಲ್ಲೂಕು ಸಿಪಿಎಂ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 6:51 IST
Last Updated 10 ನವೆಂಬರ್ 2021, 6:51 IST
ಗುಡಿಬಂಡೆಯಲ್ಲಿ ನಡೆದ ಸಿಪಿಎಂ 8ನೇ ತಾಲ್ಲೂಕು ಸಮ್ಮೇಳನದಲ್ಲಿ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜು ಮಾತನಾಡಿದರು
ಗುಡಿಬಂಡೆಯಲ್ಲಿ ನಡೆದ ಸಿಪಿಎಂ 8ನೇ ತಾಲ್ಲೂಕು ಸಮ್ಮೇಳನದಲ್ಲಿ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜು ಮಾತನಾಡಿದರು   

ಗುಡಿಬಂಡೆ: ದುಡಿಯುವ ಜನರ ಬದುಕು ಕಸಿದು ಬಂಡವಾಳದಾರರ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರದವಿರುದ್ಧ ಜನರುಹೋರಾಟ ಮಾಡುವ ಸಮಯ ಬಂದಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಿಳಿಸಿದರು.

ಪಟ್ಟಣದಲ್ಲಿ ನಡೆದ ಸಿಪಿಎಂ 8ನೇ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿದರು.

ಹಿಂದಿನ ಸರ್ಕಾರದಆಡಳಿತದಲ್ಲಿ ಭ್ರಷ್ಟಚಾರ,ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಚುನಾವಣೆಯ ಸಮಯದಲ್ಲಿ ಆಡಳಿತ ಬಿಜೆಪಿ ಪಕ್ಷದ ಮುಖಂಡರು ಮಾತನಾಡಿದ್ದರು. ಆಡಳಿತಕ್ಕೆ ಬಂದ ನಂತರ ಜನಸಾಮಾನ್ಯರ ವಿರುದ್ಧವಾಗಿ ಕಾಯ್ದೆಗಳನ್ನು ತಂದು ಬೆಲೆ ಏರಿಕೆ ಮಾಡಿದ್ದಾರೆ. ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ADVERTISEMENT

ಕೇಂದ್ರ ಸರ್ಕಾರಕ್ಕೆ ಜನಸಾಮನ್ಯರಿಂದ ತೆರಿಗೆ ರೂಪದಲ್ಲಿ ವಾರ್ಷಿಕವಾಗಿ ₹35 ಲಕ್ಷ ಕೋಟಿ ಸಂದಾಯವಾಗುತ್ತಿದೆ. ಜನಸಾಮಾನ್ಯರು ಬಳಕೆ ಮಾಡುವ ದಿನನಿತ್ಯದ ವಸ್ತುಗಳು, ಕೃಷಿಗೆ ಬೇಕಾಗುವ ಬಿತ್ತನೆ ಬೀಜದ ಬೆಲೆ ಏರಿಕೆಯಾಗುತ್ತಿದೆ. ಸಾರ್ವಜನಿಕರಿಂದ ತೆರಿಗೆ ಹಣವನ್ನುಜನಸಾಮಾನ್ಯರಿಗೆ ನೀಡದೇ ಈ ಹಣವನ್ನು ಬಂಡವಾಳಶಾಹಿಗಳ ಸಾಲ ಮನ್ನಾ ಯೋಜನೆಗೆ ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಭೂಮಿಯ ಹಕ್ಕಿಗಾಗಿ ಫಾರಂ 50, 53 ಅರ್ಜಿದಾರರಿಗೆ ಭೂಮಿ ಮಂಜೂರು ಮಾಡಬೇಕು. ಫಾರಂ 57 ಕೂಡಲೆ ಅಂಗೀಕರಿಸಿ ಭೂಮಿಯ ಹಕ್ಕು ನೀಡಬೇಕು. ಬಡ ವಸತಿ ರಹಿತರಿಗೆ ಕೂಡಲೆ ಸರ್ಕಾರಿ ಭೂ ಗುರುತಿಸಿ ನಿವೇಶನ ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.

ನೂತನ ತಾಲ್ಲೂಕು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎಚ್.ಪಿ.ಲಕ್ಷ್ಮಿನಾರಾಯಣ, ಜಯರಾಮ
ರೆಡ್ಡಿ, ಪಿಸಿ ಮಂಜುನಾಥರೆಡ್ಡಿ, ಆದಿನಾರಾಯಣರೆಡ್ಡಿ, ನರಸಿಂಹರೆಡ್ಡಿ, ಜಿ.ಶ್ರೀನಿವಾಸ್, ಲಕ್ಕ್ಷ್ಮಿನಾರಾಯಣ, ಎಲ್.ಎ.ಬಾಬು, ರಾಜಪ್ಪ, ರವೀಂದ್ರರೆಡ್ಡಿ, ನಾಗರಾಜ್, ಶ್ರೀನಿವಾಸ್, ಅದಿನಾರಾಯಣಸ್ವಾಮಿ, ಭಾಗ್ಯಮ್ಮ, ಶುಭಾವತಿ, ತಾಲ್ಲೂಕು ಕಾರ್ಯದರ್ಶಿಯಾಗಿ ಹಳೇಗುಡಿಬಂಡೆ ಲಕ್ಷ್ಮಿನಾರಾಯಣ ಪುನರಾಯ್ಕೆ ಆದರು.

ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ಮುಖಂಡ ನರಸಿಂಹರೆಡ್ಡಿ, ಕೋಚಿಮಲ್ ನಿರ್ದೇಶಕ ಅದಿನಾರಾಯಣರೆಡ್ಡಿ, ರವಿಚಂದ್ರರೆಡ್ಡಿ, ಅಂಜನೇಯರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.