ADVERTISEMENT

ಲಾಟರಿ ಮೂಲಕ ಒಲಿದ ಅಧ್ಯಕ್ಷ ಸ್ಥಾನ

ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 5:08 IST
Last Updated 10 ಡಿಸೆಂಬರ್ 2020, 5:08 IST
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಎಂಪಿಸಿಎಸ್‍ನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾದರು
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಎಂಪಿಸಿಎಸ್‍ನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾದರು   

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಲಾಟರಿಯಲ್ಲಿ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ.

ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಿಂದ ಬಿ.ಟಿ. ನಾಗೇಶ್ ಹಾಗೂ ಜೆಡಿಎಸ್‌ನಿಂದ ಬಿ.ಎನ್. ವಿಜಯ್‍ಕುಮಾರ್ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕೋಟೆ ಬಿ.ಕೆ. ಚನ್ನೇಗೌಡ ಹಾಗೂ ಜೆಡಿಎಸ್‌ನಿಂದ ರುಕ್ಮಿಣಿಯಮ್ಮ ನಾಮಪತ್ರ ಸಲ್ಲಿಸಿದ್ದರು.

ವಿಜಯ್‍ಕುಮಾರ್ ಮತ್ತು ನಾಗೇಶ್ ಪರವಾಗಿ ತಲಾ 6 ಮತಗಳು ಬಂದಿದ್ದವು. ಒಂದು ಮತ ತಿರಸ್ಕೃತಗೊಂಡಿತ್ತು. ಆದ್ದರಿಂದ ನಡೆದ ಲಾಟರಿ ಪ್ರಕ್ರಿಯೆಯಲ್ಲಿ ವಿಜಯ್‍ಕುಮಾರ್ ಅವರಿಗೆ ಅದೃಷ್ಟ ಒಲಿಯಿತು. ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿ.ಕೆ. ಚನ್ನೇಗೌಡ ಅವರಿಗೆ 7 ಮತಗಳು ಬಂದಿತ್ತು. ಅವರು ರುಕ್ಮಿಣಿಯಮ್ಮ ಅವರನ್ನು ಒಂದು ಮತದ ಅಂತರದಿಂದ ಪರಾಭವಗೊಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ADVERTISEMENT

ಎಂಪಿಸಿಎಸ್ ನಿರ್ದೇಶಕರಾದ ಎ.ಸಿ.ಚಂದ್ರಶೇಖರ್, ಕೆ.ಸಿ.ಕೇಶವಮೂರ್ತಿ, ನಾರಾಯಣಸ್ವಾಮಿ, ರುಕ್ಮಿಣಿಯಮ್ಮ, ಛಲವಾದಿ ಆನಂದ್, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ವೆಂಕಟೇಶ್, ಮಳ್ಳೂರು ಎಸ್‍ಎಫ್‍ಸಿಎಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಎಸ್. ನಾರಾಯಣಸ್ವಾಮಿ, ಜೆ.ವಿ.ಮುನಿರಾಜು, ಮಂಜುನಾಥ್, ರಘುರಾಜ್, ಎಂಪಿಸಿಎಸ್ ಮಂಜು ರವಿಚಂದ್ರ, ಹಾಲು ಪರಿವೀಕ್ಷಕ ಅಶೋಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.