ADVERTISEMENT

ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 3:22 IST
Last Updated 22 ಏಪ್ರಿಲ್ 2022, 3:22 IST

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ-ಯಗವಕೋಟೆ ರಸ್ತೆಯ ಗುಂಡ್ಲಹಳ್ಳಿ ಕ್ರಾಸ್ ಬಳಿ ಬುಧವಾರ ರಾತ್ರಿ ದ್ವಿಚಕ್ರವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ವ್ಯಕ್ತಿ ಗಾಯಗೊಂಡಿದ್ದಾರೆ.

ತಾಲ್ಲೂಕಿನ ಗುಂತೂರುಗಡ್ಡ ಗ್ರಾಮದ ಶ್ರೀಕಾಂತ್(24) ಮೃತಪಟ್ಟವರು. ಫಸಲನಾಯಕನಹಳ್ಳಿಯ ಲಕ್ಷ್ಮಣ್ ಗಾಯಗೊಂಡಿದ್ದಾರೆ.

ಈ ಇಬ್ಬರು ಸ್ವಂತ ಕೆಲಸ ನಿಮಿತ್ತ ಮುರುಗಮಲ್ಲ ಗ್ರಾಮಕ್ಕೆ ಹೋಗುತ್ತಿದ್ದಾಗ ಗುಂಡ್ಲಹಳ್ಳಿ ಕ್ರಾಸ್ ಸಮೀಪ ಕೊಳವೆಬಾವಿ ಮೋಟಾರ್‌ ಮೇಲೆತ್ತುವ ಯಂತ್ರವನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ ಎಂದು ಶ್ರೀಕಾಂತ್ ಸಂಬಂಧಿ ಜಿ.ಎನ್. ಜನಾರ್ದನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಸ್ಥಳದಲ್ಲಿಯೇ ಟ್ರ್ಯಾಕ್ಟರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಬಟ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.