ADVERTISEMENT

ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 5:16 IST
Last Updated 12 ಡಿಸೆಂಬರ್ 2020, 5:16 IST
ಶಿಡ್ಲಘಟ್ಟದ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು
ಶಿಡ್ಲಘಟ್ಟದ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು   

ಶಿಡ್ಲಘಟ್ಟ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಆಗ್ರಹಿಸಿ ಸಿಐಟಿಯು ಮುಖಂಡರ ಬೆಂಬಲದೊಂದಿಗೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ನಗರದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಸ್ ನಿಲ್ದಾಣಕ್ಕೆ ವಿವಿಧ ಕಡೆ ಹೋಗಲೆಂದು ಬಂದಿದ್ದ ಪ್ರಯಾಣಿಕರು ಬಸ್ ಇಲ್ಲದೆ ಪರದಾಡುವಂತಾಗಿತ್ತು. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲೆಂದು ಬಂದವರು ಅತ್ತ ಮನೆಗೆ ಹೋಗುವುದೋ ಇತ್ತ ಖಾಸಗಿ ವಾಹನಗಳಲ್ಲಿ ಹೋಗುವುದೋ ನಿರ್ಧರಿಸಲಾಗದೇ ಕಂಗಾಲಾಗಿದ್ದರು.

‘ನಾವು ಯಾವುದೇ ಕಾರಣಕ್ಕೂ ಕೆಲಸಕ್ಕೆ ಹಾಜರಾಗುವುದಿಲ್ಲ. ನಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಂಡರೂ ಪರವಾಗಿಲ್ಲ. ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಲೇಬೇಕು. ಇದು ನೌಕರರೇ ಕೈಗೊಂಡಿರುವ ನಿರ್ಧಾರ. ಬೇರೆ ಸಂಘಟನೆಗಳು ಕೂಡ ನಮ್ಮೊಂದಿಗೆ ಕೈ ಜೋಡಿಸಿವೆ’ ಎಂದು ಪ್ರತಿಭಟನೆ ಕೈಗೊಂಡಿದ್ದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ತಿಳಿಸಿದರು.

ADVERTISEMENT

ಸಿ.ಐ.ಟಿ.ಯು ಮುಖಂಡ ಸುದರ್ಶನ್, ಸಾರಿಗೆ ಸಿಬ್ಬಂದಿ ವಿರಾಬ್ರಹ್ಮಾಚಾರಿ, ಮುನಿಯಪ್ಪ, ವೆಂಕಟೇಶ್, ನಾರಾಯಣಸ್ವಾಮಿ, ಕಲ್ಲಪ್ಪ, ಶ್ರೀನಿವಾಸ್, ಮಂಜುನಾಥ್, ಸುರೇಶ್, ಗಂಗಾಧರ್, ಮಂಜುಳಾ, ಚೇತನ್, ವೇಣುಗೋಪಾಲ್, ರಾಜಣ್ಣ, ಸಂಜಯ್ ಕುಮಾರ್, ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.