ಗೌರಿಬಿದನೂರು: ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ಹರಿಸುವ ಪ್ರಸ್ತಾವ ವಿರೋಧಿಸಿ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರ ಸಂಘ ನಡೆಸುತ್ತಿದ್ದ 69 ದಿನಗಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದ ನಂತರ ರೈತ ಮುಖಂಡ ಮಾಳಪ್ಪ ಈ ವಿಷಯ ತಿಳಿಸಿದರು. ಬೆಳೆ ಕೊಯ್ಲು ಸಮಯವಾದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೋರಾಟವನ್ನು ಕೈಬಿಡಬಾರದು ಮತ್ತು ರೈತರ ಬೇಡಿಕೆ ಈಡೇರುವವರೆಗೂ ತಮ್ಮ ಬೆಂಬಲವಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಬಣ ಬೆಂಬಲ ಸೂಚಿಸಿದೆ. ರೈತರ ವಿರುದ್ಧ ಯಾವುದೇ ಕಾರ್ಯವನ್ನು ಕೈಗೊಂಡರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕಿನ ಅತಿದೊಡ್ಡ ಮತ್ತು ಹೆಚ್ಚು ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ಕೆರೆ ಎಂದು ಹೇಳಿದರು.
ಎ.ಸಿ ಅಶ್ವಿನ್, ತಹಶೀಲ್ದಾರ್ ಅರವಿಂದ್ ಕೆ.ಎಂ, ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ ಹೊನ್ನಯ್ಯ ಹಾಗೂ ರೈತ ಸಂಘಟನೆಯ ಸಿದ್ದಗಂಗಪ್ಪ, ಹರ್ಷವರ್ದನ್ ರೆಡ್ಡಿ, ರವಿಚಂದ್ರ ರೆಡ್ಡಿ, ರಮಾನಾಥ ರೆಡ್ಡಿ, ಕೋಡಿರ್ಲಪ್ಪಇತರರು ಇದ್ದರು.
ಗೌರಿಬಿದನೂರು : ನಗರಕ್ಕೆ ವಾಟದಹೊಸಹಳ್ಳಿ ಕೆರೆ ನೀರು ಹರಿಸುವುದನ್ನು ವಿರೋಧಿಸಿ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರ ಸಂಘ ಕಳೆದ 69 ದಿನಗಳಿಂದ ತಾಲ್ಲೂಕು ಆಡಳಿತ ಕಛೇರಿ ಮುಂದೆ ನಡೆಸುತ್ತಿದ್ದ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರೈತ ಮುಖಂಡ ಮಾಳಪ್ಪ ಹೇಳಿದರು.
ಅಪರ ಜಿಲ್ಲಾಧಿಕಾರಿ ಭಾಸ್ಕರ್ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲ್ಲೂಕಿನ ಗಡಿ ಭಾಗದಲ್ಲಿ ಆರಂಭಗೊಂಡ ಈ ರೈತರ ಹೋರಾಟ ತಾಲ್ಲೂಕಿನ ಗಡಿ ದಾಟಿ ರಾಜ್ಯ ಮಟ್ಟದ ಹೋರಾಟವಾಗಿ ಮಾರ್ಪಟ್ಟಿದೆ, ರೈತರಿಗೆ ಇದು ಬೆಳೆ ಕೊಯ್ಲು ಮಾಡುವ ಸಮಯವಾದ್ದರಿಂದ ಈ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ, ಈ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದು ಬೇಡ, ವಾಟದಹೊಸಹಳ್ಳಿ ರೈತರ ಬೇಡಿಕೆಗಳು ಈಡೇರುವವರೆಗೂ ನಾನು ಬೆಂಬಲವಾಗಿ ನಿಲ್ಲುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕೋಡಿಹಳ್ಳಿ ಚಂದ್ರ ಶೇಖರ್ ಬಣ ಸಹ ಇಂದು ಬೆಂಬಲ ಸೂಚಿಸಿದ್ದಾರೆ, ಒಂದು ವೇಳೆ ರೈತರ ವಿರುದ್ಧವಾಗಿ ಯಾವುದೇ ಕಾಮಗಾರಿಯನ್ನು ಕೈಗೊಂಡರೆ ಉಗ್ರ ಹೋರಾಟ ಮಾಡುವುದಾಗಿ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ
ಮಾತನಾಡಿ, ವಾಟದಹೊಸಹಳ್ಳಿ ಕೆರೆಯು ತಾಲ್ಲೂಕಿನಲ್ಲಿಯೇ ಅತೀ ದೊಡ್ಡ ಕೆರೆಯಾಗಿದ್ದು, ಅತೀ ಹೆಚ್ಚು ನೀರು ಸಂಗ್ರಹಣ ಸಾಮರ್ಥ್ಯ ಹೊಂದಿದೆ, ಇದನ್ನು ಉಳಿಸಿಕೊಳ್ಳಲು ರೈತರು 69 ದಿನಗಳಿಂದ ನಿರಂತವಾಗಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸುತ್ತಿದ್ದಾರೆ, ಈ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ರೈತರಿಗೆ ಭರವಸೆ ನೀಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಭಾಸ್ಕರ ಅವರು, ಕಳೆದ ಹಲವು ದಿನಗಳಿಂದ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ, ವಾಟದಹೊಸಹಳ್ಳಿ ರೈತರು ಐದು ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ್ದಾರೆ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರವಾಗಿ ಅವರ ಬೇಡಿಕೆಗಳನ್ನು ಈಡೇರಿಸಲಾಗುವುದು, ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಎ ಸಿ ಅಶ್ವಿನ್, ತಹಶೀಲ್ದಾರ್ ಅರವಿಂದ್ ಕೆ ಎಂ, ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ ಕೆ ಹೊನ್ನಯ್ಯ, ಹಾಗೂ ರೈತ ಸಂಘಟನೆಯ ಸಿದ್ದಗಂಗಪ್ಪ, ಹರ್ಷವರ್ದನ್ ರೆಡ್ಡಿ, ರವಿಚಂದ್ರ ರೆಡ್ಡಿ, ರಮಾನಾಥ ರೆಡ್ಡಿ, ಕೋಡಿರ್ಲಪ್ಪ ಮುಂತಾದ ಪದಾಧಿಕಾರಿಗಳು ಹಾಗೂ ವಾಟದಹೊಸಹಳ್ಳಿ ರೈತರು ಪಾಲ್ಗೊಂಡಿದ್ದರು.