ADVERTISEMENT

ಶಿಡ್ಲಘಟ್ಟ: ಸೇತುವೆ ಕೆಳಗೆ ಬಿದ್ದ ವಾಹನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:24 IST
Last Updated 15 ಸೆಪ್ಟೆಂಬರ್ 2022, 4:24 IST
ಶಿಡ್ಲಘಟ್ಟದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಹಂಡಿಗನಾಳ ಸಮೀಪ ಅಮ್ಮನಕೆರೆ ರಾಜಕಾಲುವೆಯ ಸೇತುವೆ ಕೆಳಗೆ ಬಿದ್ದಿರುವ ವಾಹನ
ಶಿಡ್ಲಘಟ್ಟದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಹಂಡಿಗನಾಳ ಸಮೀಪ ಅಮ್ಮನಕೆರೆ ರಾಜಕಾಲುವೆಯ ಸೇತುವೆ ಕೆಳಗೆ ಬಿದ್ದಿರುವ ವಾಹನ   

ಶಿಡ್ಲಘಟ್ಟ: ಕ್ಯಾರೆಟ್ ಕೀಳಲು ಕೂಲಿಕಾರರನ್ನು ಚಿಕ್ಕಬಳ್ಳಾಪುರದ ಕಡೆಗೆ ಕರೆದೊಯ್ಯುತ್ತಿದ್ದ ಸರಕು ಸಾಗಾಣಿಕೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಕೆಳಗಿ ಉರುಳಿ ಬಿದ್ದಿದ್ದು, ವಾಹನದಲ್ಲಿದ್ದ ಕೂಲಿ ಕಾರ್ಮಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.

ತಾಲ್ಲೂಕಿನ ಅರಿಕೇರೆ ಗ್ರಾಮದಿಂದ ಕೂಲಿಕಾರರನ್ನು ಕರೆದುಕೊಂಡು ಹೊರಟಿದ್ದ ಟೆಂಪೋ ಬುಧವಾರ ಮುಂಜಾನೆ ಶಿಡ್ಲಘಟ್ಟದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಹಂಡಿಗನಾಳ ಸಮೀಪ ಅಮ್ಮನಕೆರೆ ರಾಜಕಾಲುವೆಯ ಸೇತುವೆ ಕೆಳಗೆ ಉರುಳಿ ಬಿದ್ದಿದೆ. ಹಳೆಯ ಮತ್ತು ಹೊಸ ಸೇತುವೆಯ ಮಧ್ಯೆ ವಾಹನ ಸಿಲುಕಿಕೊಂಡಿದ್ದರಿಂದ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಾಯುವಿಹಾರಕ್ಕೆ ತೆರಳಿದ್ದ ನಾಗರಿಕರು ಅಪಘಾತ ಕಂಡೊಡನೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.