ADVERTISEMENT

ಶಿಡ್ಲಘಟ್ಟ|ರೈತರಿಗೆ ಪಂಪ್‌, ಮೋಟಾರ್ ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 13:24 IST
Last Updated 15 ಮೇ 2025, 13:24 IST
ಶಿಡ್ಲಘಟ್ಟದಲ್ಲಿ ರೈತರಿಗೆ ಪಂಪ್‌ ಮೋಟಾರ್, ಕೇಬಲ್ ವಿತರಿಸಲಾಯಿತು
ಶಿಡ್ಲಘಟ್ಟದಲ್ಲಿ ರೈತರಿಗೆ ಪಂಪ್‌ ಮೋಟಾರ್, ಕೇಬಲ್ ವಿತರಿಸಲಾಯಿತು   

ಶಿಡ್ಲಘಟ್ಟ: ಕೆಲ ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಪಂಪ್‌ ವಿತರಣೆ ವಿಳಂಬವಾಗಿದೆ. ಇದೀಗ ಎಲ್ಲವೂ ಬಗೆಹರಿದಿದ್ದು ರೈತರಿಗೆ ವಿತರಿಸಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 2021-22 ಹಾಗೂ 2022-23ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ರೈತ ಫಲಾನುಭವಿಗಳಿಗೆ ಪಂಪ್‌ ಮೋಟಾರ್, ಕೇಬಲ್ ಇನ್ನಿತರೆ ಪರಿಕರಗಳನ್ನು ಪ್ರವಾಸಿ ಮಂದಿರದಲ್ಲಿ ಬುಧವಾರ ವಿತರಿಸಿ ಮಾತನಾಡಿದರು.

2021-22ನೇ ಸಾಲಿನಲ್ಲಿ ಆರಂಭಗೊಂಡ ಈ ಯೋಜನೆ ಕೆಲ ಸಮಸ್ಯೆಗಳಿಂದಾಗಿ ವಿಳಂಬವಾಗಿತ್ತು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಇದನ್ನು ಪುನಶ್ಚೇತನಗೊಳಿಸಿ ಇಂದು ಫಲಾನುಭವಿಗಳಿಗೆ ಲಾಭ ತಲುಪುವಂತೆ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಬಸವಾಪಟ್ಟಣ ಗ್ರಾಮದ ದೊಡ್ಡಮುನಿಯಪ್ಪ, ಕೋಟಗಲ್ ಗ್ರಾಮದ ನಾರಾಯಣಸ್ವಾಮಿ, ಬಚ್ಚಹಳ್ಳಿ ಗ್ರಾಮದ ನರಸಿಂಹಯ್ಯ, ಹಿತ್ತಲಹಳ್ಳಿ ಗ್ರಾಮದ ರವಿಕುಮಾರ್ ಮತ್ತು ನಂದನಹೊಸಳ್ಳಿ ಗ್ರಾಮದ ಶ್ರೀನಿವಾಸ್‌ಗೆ ಪರಿಕರ ವಿತರಿಸಲಾಯಿತು.

ಉಳಿದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ತಾದೂರು ರಘು, ಕುಮಾರ್, ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.