ADVERTISEMENT

ಅಕ್ರಮ ಗೋಹತ್ಯಾ ಕೇಂದ್ರ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 11:05 IST
Last Updated 13 ಜನವರಿ 2011, 11:05 IST

ಚಿಕ್ಕಮಗಳೂರು: ನಗರದ ಸಂತೆ ಮೈದಾನದ ಸಮೀಪವಿರುವ ತಮಿಳು ಕಾಲೊನಿಯ ತಗ್ಗು ಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಗೋಹತ್ಯಾ ಕೇಂದ್ರಗಳ ಮೇಲೆ ನಗರ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿದರು.

ಡಿವೈಎಸ್‌ಪಿ ವೇದಮೂರ್ತಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಈ ಸಂದರ್ಭದಲ್ಲಿ 40ಕ್ಕೂ ಅಧಿಕ ಜಾನು ವಾರು, ಕತ್ತರಿಸಿ ಬೇರ್ಪಡಿಸಿದ್ದ ಟನ್ ಗಟ್ಟಲೆ ಚರ್ಮ ಮತ್ತು ಮಾಂಸ ಪತ್ತೆಯಾಯಿತು.ದಾಳಿಯ ವೇಳೆ ಮಂತು, ಅಮ್ಜದ್, ಖಾಲಿದ್, ಸೋಮ ಹಾಗೂ ಜಾವಿದ್ ಎಂಬುವವರನ್ನು ಪೊಲೀಸರು ಬಂಧಿಸಿದರು. ಚರ್ಮ ಮತ್ತು ಮಾಂಸದ ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನೂ ಪೊಲೀಸರು ವಶಪಡಿಸಿಕೊಂಡರು.

ಅನಧಿಕೃತ ಗೋಹತ್ಯಾ ಕೇಂದ್ರದ ಒಂದು ಪ್ರದೇಶದಲ್ಲಿ ಜೀವಂತ ಜಾನು ವಾರುಗಳನ್ನು ಕೂಡಿ ಹಾಕಲಾಗಿತ್ತು. ಇನ್ನೊಂದೆಡೆ ಜಾನುವಾರುಗಳನ್ನು ಹತ್ಯೆಗೈದು ಮಾಂಸ, ಚರ್ಮಗಳನ್ನು ಬೇರ್ಪಡಿಸಲಾಗುತ್ತಿತ್ತು.ದಾಳಿಯ ಸಂದರ್ಭದಲ್ಲಿ ಪೊಲೀಸರು ವಶಪಡಿಸಿಕೊಂಡ 40ಕ್ಕೂ ಹೆಚ್ಚು ಜೀವಂತ ಜಾನುವಾರುಗಳನ್ನು ಕಲ್ಯಾಣ ನಗರದ ಬಸವ ಮಂದಿರಕ್ಕೆ ನೀಡಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.