ಚಿಕ್ಕಮಗಳೂರು: ಕೆಳಗೂರು ಗ್ರಾ.ಪಂ. ಅಧ್ಯಕ್ಷ ಮತ್ತು ಸದಸ್ಯರ ನಿಯೋಗ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಂಗೇಗೌಡ ಅವರನ್ನು ಶನಿವಾರ ಭೇಟಿ ಮಾಡಿ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿ ಸುವಂತೆ ಕೋರಿ ಮನವಿ ಸಲ್ಲಿಸಿತು.
2011-12ನೇ ಸಾಲಿಗೆ ಬಿಡು ಗಡೆಯಾದ ಒಂದನೇ ಕಂತಿನ ಶಾಸನ ಬದ್ಧ ಅನುದಾನದಲ್ಲಿ ಮೆಸ್ಕಾಂನ ಬಾಕಿ ಇದ್ದ ಬಿಲ್ಲಿಗೆ ಶೇ.75ಕ್ಕಿಂತ ಹೆಚ್ಚು ಹಣವನ್ನು ಪಾವತಿಸಿ ಅತ್ಯಲ್ಪ ಪ್ರಮಾ ಣದ ಅನುದಾನವನ್ನು ಗ್ರಾ.ಪಂ.ಗೆ ಮೀಸಲಿಟ್ಟಿರುವ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನೆಡೆಯುಂಟಾಗುತ್ತಿದೆ ಎಂದು ಸಿಇಒ ಗಮನಕ್ಕೆ ತಂದರು.
ಕೆಲವು ಗ್ರಾ.ಪಂ.ಗಳು ಅತಿ ಹೆಚ್ಚು ಮೆಸ್ಕಾಂ ಬಿಲ್ ಬಾಕಿ ಉಳಿಸಿಕೊಂ ಡಿದ್ದರೂ ಕಡಿಮೆ ಅನುದಾನವನ್ನು ಮೆಸ್ಕಾಂಗೆ ಮೀಸಲಿಡಲಾಗಿದೆ. ಈ ರೀತಿಯ ತಾರತಮ್ಯವನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.ಗ್ರಾ.ಪಂ. ವ್ಯಾಪ್ತಿಯಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ. ಅಧ್ಯಕ್ಷೆ ರಾಧಾ ಗಂಗಾಧರ್, ಉಪಾಧ್ಯಕ್ಷ ಎಂ.ಬಿ.ಬಸವಯ್ಯ, ಸದಸ್ಯರುಗಳಾದ ಸಿ.ಎ.ಆಸೀಫ್, ದೇವರಾಜ್, ಸುಮಿತ್ರ, ಬಿಲ್ಲೇಶ, ಮತ್ತು ಸುಜಾತ ಇದ್ದರು.
ಬ್ಯಾಂಕ್‌ಗೆ 20.46 ಲಕ್ಷ ಲಾಭ
ಚಿಕ್ಕಮಗಳೂರು: ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 20.46 ಲಕ್ಷರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷೆ ಬಿ.ಸಿ.ಗೀತಾ ಹೇಳಿದರು. ನಗರದ ಬಸವನಹಳ್ಳಿ ಮುಖ್ಯರಸ್ತೆಯ ಬ್ಯಾಂಕಿನ ನೂತನಕಟ್ಟಡದಲ್ಲಿ ಶನಿವಾರ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ನಿರ್ದೇಶಕ ಬನಶಂಕರಿ ಜೋಷಿ, ಸುಜಾತ ಕೃಷ್ಣ ಮೂರ್ತಿ ಶ್ಯಾಮಲಾ ಮಂಜುನಾಥ, ವ್ಯವಸ್ಥಾಪಕ ಆರ್.ಆರ್.ಸತೀಶ್, ನಿರ್ದೇಶಕಿ ಜಯ ಶ್ರಿನಂಜರಾಜ್, ಉಪಾಧ್ಯಕ್ಷೆ ಸುಧಾ ಡಾ. ರಾಜು, ನಿರ್ದೇಶಕರಾದ ಟಿ.ಪಿ. ಜಯಲಕ್ಷ್ಮಿ, ಸೌಭಾಗ್ಯಗೋಪಾನ್, ಸೌಮ್ಯ ವಜ್ರಪ್ಪ, ಕಮಲಾ ಬಸವರಾಜ್ ಮತ್ತು ಕೆ.ಎಸ್.ಶೈಲಜಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.