ADVERTISEMENT

ಆಸ್ಪತ್ರೆ ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 8:32 IST
Last Updated 20 ಡಿಸೆಂಬರ್ 2013, 8:32 IST

ಬಾಳೆಹೊನ್ನೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ವಿರೋಧಿಸಿ ವಿವಿಧ ಸಂಘಟನೆಗಳು ಗುರುವಾರ  ಜೇಸಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.   ರೋಟರಿ ವೃತ್ತದಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು ಜೇಸಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು. ನಂತರ ಮೆರವಣಿಗೆ ಮೂಲಕ ಸಾಗಿ ಆಸ್ಪತ್ರೆ ಎದುರು ಧರಣಿ ಕುಳಿತರು.

  ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಶೃಂಗೇರಿ ಶಿವಣ್ಣ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಕರ್ತವ್ಯದಲ್ಲಿರುವ ವೈದ್ಯರ ವಿರುದ್ಧ ಹಲವು ದೂರುಗಳಿವೆ .ಅಲ್ಲದೆ ತಕ್ಷಣ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿ ಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು,   ಕರ್ತವ್ಯದಲ್ಲಿರುವ ಮಹಿಳಾ ವೈದ್ಯರು ರೋಗಿಗಳನ್ನು ಮೈ ಮುಟ್ಟಿ ಪರೀಕ್ಷೆ ನಡೆಸುತ್ತಿಲ್ಲ.

ಅವರ ವಾಸಸ್ಥಳ ದೂರವಿದ್ದು, ಸಂಜೆ ವೇಳೆ ತುರ್ತು ಸಂದರ್ಭದಲ್ಲಿ ಅವರು ರೋಗಿಗಳಿಗೆ ಲಬ್ಯವಾಗುತ್ತಿಲ್ಲ, ತಕ್ಷಣ ಮಹಿಳಾ ವೈದ್ಯರನ್ನು ಬದಲಾಯಿಸಬೇಕು ಎಂದು ಅವರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ಬೇಡಿಕೆಗಳನ್ನು ಪರಿಶೀಲಿಸುವಂತೆ ಪ್ರತಿಭಟನಾಕಾರರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಿಂದ ಪ್ರಭಾರಿ ಡಿಎಚ್ಒ ತೀರ್ಥನಾಥ್ ಸ್ಥಳಕ್ಕೆ ಬಂದು ಮನವಿ ಪತ್ರ ಪಡೆದರು.

  ಈ ವೇಳೆಯಲ್ಲಿ ಸ್ಥಳಕ್ಕೆ ಆಗಮಿಸದ ಶಾಹೀದಾಬಾನು ಹಾಗೂ ಕಾವ್ಯಭಟ್‌ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಅಧಿಕಾರಿ ಎದುರು ಎಳೆಎಳೆಯಾಗಿ ಬಿಡಿಸಿಟ್ಟರು.   ಮನವಿ ಸ್ವೀಕರಿಸಿ ಮಾತನಾಡಿದ ತೀರ್ಥನಾಥ್‌, ಮೂರು ದಿನದೊಳಗೆ   ವೈದ್ಯರನ್ನು ಆಸ್ಪತ್ರೆಗೆ ನೇಮಕಮಾಡಲಾ ಗುವುದು. ಖಾಲಿ ಇರುವ ಗ್ರೂಪ್‌ ಡಿ ಹುದ್ದೆಗೆ ಸರ್ಕಾರ ದಿಂದ ನೇಮಕ ಪ್ರಕ್ರೀಯೆ ಆರಂಭಗೊಂಡಿದ್ದು, ಶೀಘ್ರವೇ ಭರ್ತಿಯಾಗಲಿದೆ ಎಂದು ಭರವಸೆ ನೀಡಿದರು.

   ತಾಲ್ಲೂಕು ಬಿಜೆಪಿ ಘಟಕ, ಆಟೋ, ಟ್ರಾಕ್ಟರ್, ಟ್ಯಾಕ್ಸಿ, ಗೂಡ್ಸ್ ಆಟೋ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ಸದಸ್ಯರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ, ಕೆ.ಟಿ.ವೆಂಕ ಟೇಶ್‌, ಪ್ರೇಮೇಶ್ ಮಾಗಲು. ಕೆ.ಕೆ.ವೆಂಕ ಟೇಶ್, ಕರವೇ ನಗರ ಅಧ್ಯಕ್ಷ ಮಧು ಕಾನ್ಕೆರೆ, ಆರ್‌.ಡಿ.ಮಹೇಂದ್ರ, ಆಟೋ ಚಾಲಕರ ಸಂಘದ ಅಧ್ಯಕ್ಷ ಸದಾಶಿವ, ಇರ್ಷಾದ್‌, ಜಗದೀಶ್ಚಂದ್ರ  ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT