ADVERTISEMENT

ಕಡೂರು: ಗ್ರಾಮ ಲೆಕ್ಕಿಗರಿಗೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 9:00 IST
Last Updated 5 ಅಕ್ಟೋಬರ್ 2012, 9:00 IST

ಪಹಣಿಯಲ್ಲಿ ನಿಖರ ಮಾಹಿತಿ: ಸೂಚನೆ

ಕಡೂರು: ಕೃಷಿ ಬೆಳೆಗಳ ಉತ್ಪಾದನೆ, ನಷ್ಟದ ಪ್ರಮಾಣ ಕಂಡು ಹಿಡಿಯಲು ಹಲವು ಕಾರಣಗಳಿಂದ ಕೃಷಿ ಸಂಬಂಧಿತ ಅಂಕಿ ಅಂಶಗಳನ್ನು ಪಹಣಿಯಲ್ಲಿ ನಮೂದಿಸುವುದು ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಿಗರು ಮತ್ತು ಪಿಡಿಒಗಳಿಗೆ ತರಬೇತಿ ನೀಡ ಲಾಗುತ್ತಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವೆಂಕಟೇಶ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮಲೆಕ್ಕಿಗರು ಮತ್ತು ಪಿಡಿಒಗಳಿಗೆ ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಾಯತ್‌ರಾಜ್ ನಿಯಮಗಳ ಪ್ರಕಾರ ಜನಗಣತಿ, ಬೆಳೆಗಣತಿ, ಜಾನುವಾರು, ಕೃಷಿ ಉತ್ಪಾ ದನೆ ಮತ್ತು ಪಶುಸಂಪತ್ತು ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಪಹಣಿಗಳಲ್ಲಿ ನಿಖರವಾಗಿ ನಮೂದಿಸಲು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಸಹಕಾರ ನೀಡಲು ಎಲ್ಲರು ಸಹಕರಿಸಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿ ಪ್ರತಿ ಋತುವಿನಲ್ಲೂ ಪಹಣಿಯಲ್ಲಿ ಬೆಳೆ ದಾಖಲಾಗಿದೆಯೇ ಎಂದು ತಿಳಿ ಯಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ವರ್ಷದಲ್ಲಿ ಮೂರು ಬಾರಿ ತಪಾಸಣೆ ಮಾಡಿ ಬೆಳೆ ದಾಖಲಾತಿಯನ್ನು ಖಚಿತಪಡಿಸಿಕೊಂಡು ಪಹಣಿಯನ್ನು ಸರಿಪಡಿಸುವಂತೆ ಅವರು ಸೂಚಿಸಿದರು.

,ಶಿರಸ್ತೇದಾರ್ ತಿಮ್ಮಾಬೋವಿ ಮಾತನಾಡಿ, ಗ್ರಾಮಲೆಕ್ಕಿಗರು ನೀಡುತ್ತಿರುವ ಪಹಣಿಯಲ್ಲಿ ಖುಷ್ಕಿ, ತೆಂಗು, ರಾಗಿ ಮತ್ತು ಇತರೆ ಬೆಳೆಯನ್ನು ಮಾತ್ರ ನಮೂದಿಸುತ್ತಿದ್ದು, ತಾಲ್ಲೂಕಿನಲ್ಲಿ ತರಕಾರಿಯನ್ನು ಯತೇಚ್ಛವಾಗಿ ಬೆಳೆಯುತ್ತಿದ್ದರೂ ಗ್ರಾಮ ಲೆಕ್ಕಾಧಿಕಾರಿಗಳು ನಮೂದಿಸುತ್ತಿಲ್ಲ. ಎಲ್ಲಿಯೋ ಮೂಲೆಯಲ್ಲಿ ಕುಳಿತು ಪಹಣಿಗಳನ್ನು ಬರೆಯುವುದನ್ನು ಮೊದಲು ನಿಲ್ಲಿಸಿ ಗ್ರಾಮಗಳತ್ತ ತೆರಳಿ ರೈತರನ್ನು ಸಂಪರ್ಕಿಸಿ ಅವರು ನೀಡುವ ಮಾಹಿತಿಯನ್ನು ಪಡೆದು ನಮೂದಿಸಿ ಎಂದು ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು. 

   ಕೃಷಿ, ತೋಟಗಾರಿಕೆ ಇಲಾಖೆಗಳ ಅಂಕಿ ಅಂಶಕ್ಕೂ ಕಂದಾಯ ಇಲಾಖೆ ಬೆಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಿ, ಪಹಣಿ ಬರೆದ ದಿನಾಂಕ, ತಪಾಸಣೆ ಕೈಗೊಂಡವರು, ಸರ್ವೆ ನಂಬರ್ ಮತ್ತು ಪೂರ್ಣ ವಿವರಗಳೊಂದಿಗೆ ಪಹಣಿಗಳನ್ನು ಭರ್ತಿ ಮಾಡಿ ಎಂದರು. 

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿ ಟಿ.ಎನ್.ಮೂರ್ತಿ, ಯೋಜನಾಧಿಕಾರಿ ಮಹೇಶ್ವರಪ್ಪ  ಗ್ರಾಮ ಪಂಚಾಯಿತಿಗಳಿಂದ ಬಂದಿದ್ದ ಗ್ರಾಮ ಲೆಕ್ಕಿಗರು, ಪಿಡಿಒಗಳು ಇದ್ದರು.


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.