ADVERTISEMENT

ಕಡೂರು: ರಸ್ತೆ ವಿಸ್ತರಣೆ 12ರಿಂದ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 9:25 IST
Last Updated 9 ಏಪ್ರಿಲ್ 2012, 9:25 IST

ಕಡೂರು: ಕಡೂರು-ಬೀರೂರು ಪಟ್ಟಣ ಗಳಿಗೆ ಭದ್ರಾನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ
ಕಾಮಗಾರಿ ಕೆಲಸ ಮುಗಿಯುತ್ತಿದ್ದು, ಅವಳಿ ಪಟ್ಟಣಗಳಲ್ಲಿ 50 ಅಡಿ ರಸ್ತೆ ವಿಸ್ತರಣೆಗೆ ಜೆಸಿಬಿ ಯಂತ್ರದಿಂದ ಇದೇ 12ರಿಂದ ಕಾರ್ಯಾಚರಣೆ ನಡೆಸಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.

ಸಾರ್ವಜನಿಕರಿಂದ ಕಟ್ಟಡ ತೆರವು ಗೊಳಿಸಲು ಆಕ್ಷೇಪಣೆಗಳು ಹೆಚ್ಚಾಗಿ ಬರುತ್ತಿದ್ದು, ಭದ್ರಾ ಕುಡಿಯುವ ನೀರಿನ ಯೋಜನೆಯಿಂದ ಎರಡು ಪಟ್ಟಣಗಳು ಸೇರಿದಂತೆ 20 ಕ್ಕೂ ಹೆಚ್ಚಿನ ಹಳ್ಳಿಗಳ 1.5ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಜನರಿಗೆ ಕುಡಿಯುವ ನೀರು ದೊರಕಲಿದೆ.

ಸಾರ್ವಜನಿಕರು, ಸಂಘ-ಸಂಸ್ಥೆಗಳ ನೆರವಿನಿಂದ ಪುರಸಭೆ ಜೆಸಿಬಿ ಯಂತ್ರದಿಂದ ಗುರುವಾರ ಕಟ್ಟಡಗಳನ್ನು ತೆರವುಗೊಳಿಸಲು ತಯಾರಿ ನಡೆಸಲಾಗಿದೆ. 50 ಅಡಿ ಒಳಗಿರುವ ಖಾಸಗಿ ಕಟ್ಟಡಗಳನ್ನು ಮಾಲೀಕರು ತೆರವುಗೊಳಿಸಬೇಕು. ಇಲ್ಲವಾದರೆ ಸಾರ್ವಜನಿಕರ ಸಹಕಾರದೊಂದಿಗೆ ಕಟ್ಟಡ ನೆಲಸಮ ಮಾಡಲಾಗುವುದು  ಎಂದರು.

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಇಲ್ಲಿನ ಕೊಳವೆ ಬಾವಿಗಳಲ್ಲಿ ದೊರಕುವ ನೀರು ರಾಸಾಯನಿಕ ಮಿಶ್ರಿತ, ಕಲುಷಿತವಾ ಗಿರುವುದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಭದ್ರಾ ಕುಡಿಯುವ ನೀರು ಸಮರ್ಪಕ ವಾಗಿ ದೊರೆಯುವ ಕಾರಣ ಪಟ್ಟಣದ ನಾಗರಿಕರು ಸ್ವಇಚ್ಛೆಯಿಂದ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದರು.

ಈಗಾಗಲೇ ಅನೇಕ ಸರ್ಕಾರಿ, ಖಾಸಗಿ ಸಂಸ್ಥೆ, ದೇವಾಲಯಗಳ ಕಟ್ಟಡ ಗಳನ್ನು ಸ್ವತಃ 50 ಅಡಿಗಳಿಗೆ ತೆರವು ಗೊಳಿಸಲಾಗಿದೆ.   ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆ ಕೈಗೆತ್ತಿಕೊಂಡರೆ 70 ಅಡಿಗಳವರೆಗೆ ವಿಸ್ತರಿಸುವ ಸೂಚನೆ ಇದೆ ಎಂದರು.

ಆಗಸ್ಟ್ ತಿಂಗಳೊಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿರುವ ದೃಷ್ಟಿ ಯಿಂದ ಈ ಬಾರಿ ಕಟ್ಟಡಗಳ ತೆರವು ಗೊಳಿಸುವ ಕಾರ್ಯ ಪೂರ್ಣ ವಾಗಬೇಕಿದೆ. ಆದ್ದರಿಂದ ಕಟ್ಟಡಗಳ ಮಾಲೀಕರು ಸಹಕಾರ ನೀಡಲಿ ಎಂದು ನಾಗರಿಕರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.