ADVERTISEMENT

ಕಳಸ ಬಂದ್; ವರ್ತಕರ ಬೆಂಬಲ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 9:36 IST
Last Updated 4 ಡಿಸೆಂಬರ್ 2012, 9:36 IST

ಕಳಸ: ಇದೇ ಡಿಸೆಂಬರ್ 31ರ ಗಡುವಿನ ಬಗ್ಗೆ ದಿನಗಣನೆ ನಡೆಸಿರುವ ಇನಾಂ ಭೂಮಿಯ ಸಂತ್ರಸ್ತರ ಪರವಾಗಿ ಪಟ್ಟಣದಲ್ಲಿ ಸೋಮವಾರ ದಿನವಿಡೀ ಬಂದ್ ಆಚರಿಸಲಾಯಿತು.

ಇನಾಂ ವಾಸಿಗಳನ್ನು ಸರ್ಕಾರ ಕಡೆಗಣೆಸಿದ್ದು ಜನಪ್ರತಿನಿಧಿಗಳ ಕಣ್ಣು ತೆರೆಸಲು ಅಖಿಲ ಭಾರತ ಯುವಜನ ಫೆಡರೇಶನ್ ಸೋಮವಾರ ಕಳಸ ಬಂದ್ ಮಾಡಲು ಕರೆ ನೀಡಿತ್ತು. ಬಂದ್ ಕರೆಗೆ ಪೂರಕವಾಗಿ ಪ್ರತಿಕ್ರಿಯಿಸಿದ ವ್ಯಾಪಾರ ಸ್ಥರು ಸೋಮವಾರ ಯಾವುದೇ ಅಂಗಡಿ-ಮುಂಗಟ್ಟು ಅಥವಾ ಹೋಟೆಲ್ ತೆರೆಯದೆ ಬಂದ್ ಯಶಸ್ವಿ ಗೊಳಿಸಿದರು. ಕೆಲ ಶಾಲಾಕಾಲೇಜು ಗಳಲ್ಲೂ ರಜೆ ಘೋಷಿಸಲಾಯಿತು.

ಹೇಮಾವತಿ ನದಿ ಮೂಲವಾದ ಜಾವಳಿಯಿಂದ ಕಳಸದವರೆಗೆ ಬೈಕ್‌ಗಳಲ್ಲಿ ಜಾಥಾ ನಡೆಸಿದ ಎ.ಐ.ವೈ.ಎಫ್.ನ 50ಕ್ಕೂ ಹೆಚ್ಚು ಬೈಕ್‌ಸವಾರರನ್ನು ಕೈಮರದ ಬಳಿ ಇನಾಂ ವಾಸಿಗಳು ಬರಮಾಡಿಕೊಂಡರು. ಆನಂತರ ಮುಖ್ಯರಸ್ತೆಯಲ್ಲಿ ಬೈಕ್ ಜಾಥಾ ಮತ್ತು ಇನಾಂ ವಾಸಿಗಳ ವೆುರವಣಿಗೆ ಜೊತೆಜೊತೆಯಾಗಿ ಸಾಗಿತು.

 ನಾಡ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಗಲು ಹರೀಶ್, 15 ದಿಗಳ ಕಾಲ ಇನಾಂ ಸಂತ್ರಸ್ತರು ಸತತ ಧರಣಿ ನಡೆಸಿದರೂ ತಾ.ಪಂ., ಜಿ.ಪಂ. ಸದಸ್ಯರು ಅಥವಾ ಶಾಸಕ, ಸಂಸದರು ಸ್ಥಳಕ್ಕೆ ಭೇಟಿ ನೀಡದಿರುವುದು ನಾಚಿಕೆಗೇಡು. ಅದರೆ ಒಗ್ಗಟ್ಟಿನಿಂದ ಮುಂದುವರೆದರೆ ಯಶಸ್ಸು ಸಿಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಮಲೆನಾಡು ಭೂಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ಕುಮಾರ್ ಮಾತನಾಡಿ, ದೊಡ್ಡ ಬೆಳೆಗಾರರ ಹಿತ ಕಾಯಲು ಸರ್ಕಾರ ಬಡ ಕೃಷಿಕರ ಭೂಮಿ ಖುಲ್ಲಾ ಮಾಡಲು ಮುಂದಾಗಿದೆ. ರಾಜಕಾರಣಿ ಗಳಿಂದಲೇ  ಸೃಷ್ಟಿಯಾಗಿರುವ ಇನಾಂ ಸಮಸ್ಯೆಯ ಪರಿಹಾರಕ್ಕೆ ಯಾವುದೇ ರಾಜಕಾರಣಿಗಳು ಮುಂದಾಗ ದಿರು ವುದು ದುರದೃಷ್ಟ. 5 ಎಕರೆ ಒಳಗಿನ ಎಲ್ಲ ಕೃಷಿಕರ ಭೂಮಿಯನ್ನು ಖುಲ್ಲಾ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಸಿಪಿಐ ಮುಖಂಡ ರವಿ ಕುಮಾರ್ ಮಾತನಾಡಿ, ಇನಾಂ ಭೂಮಿ ಖುಲ್ಲಾ ಮಾಡಲು ನೀಡಿರುವ ಆದೇಶವನ್ನು ಜಾರಿಗೊಳಿಸದಂತೆ ತಡೆಯಲು ಪ್ರಬಲ ಜನಾಂದೋಲನದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು. ಮುಖಂಡರಾದ ಸಾತಿ ಸುಂದರೇಶ್, ಲಕ್ಷ್ಮಣಾಚಾರ್, ಗೋಪಾ ಲ ಶೆಟ್ಟಿ, ಸತೀಶ್ ಕಾರಗದ್ದೆ, ನಾಗೇಶ್, ರಮೇಶ್, ಮಂಜುನಾಥ ಆಚಾರ್, ಶಶಿಕಾಂತ್, ಶ್ರೆಧರಶೆಟ್ಟಿ , ಆನಂದ, ರಾಜು ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.