ADVERTISEMENT

ತಡವಾಗಿ ಬಂದರೆ ಕ್ರಮಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 8:19 IST
Last Updated 19 ಸೆಪ್ಟೆಂಬರ್ 2013, 8:19 IST

ನರಸಿಂಹರಾಜಪುರ: ತಾಲ್ಲೂಕು ಪಂಚಾ­ಯಿತಿ ಸಭೆಯನ್ನು ಕೆಲವು ಅಧಿ­ಕಾರಿಗಳು ಗಂಭೀರವಾಗಿ ಪರಿಗಣಿ­ಸದೆ ಸಭೆಗೆ ತಡವಾಗಿ ಹಾಜರಾಗುತ್ತಿದ್ದಾರೆ. ಹಾಗಾಗಿ ಮುಂದಿನ ಸಭೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗದ ಅಧಿಕಾರಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು.

ಸಭೆಯಲ್ಲಿ ಅಧಿಕಾರಿಗಳು ತಡವಾಗಿ ಹಾಜರಾಗುತ್ತಿರುವ ಬಗ್ಗೆ ಚರ್ಚೆ ಬಂದಾಗ  ವಿಷಯ ಪ್ರಸ್ತಾಪಿಸಿದ ಅವರು, ಇನ್ನೂ ಮುಂದೆ ಸಭೆಗೆ ತಡವಾಗಿ ಬರುವವರನ್ನು ಸಭೆಗೆ ಸೇರಿಸದೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಗುಬ್ಬಿಗಾ, ಕಾನೂರು, ಸೀತೂರು, ಆಡುವಳ್ಳಿ, ನಾಗಲಾಪುರ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ವಿತರಿಸಲು ಮುಂದಿನ ಕೆಡಿಪಿ ಸಭೆಯೊಳಗೆ ತಲಾ 2 ಎಕರೆ ಜಮೀನು ಸಮೀಕ್ಷೆ ಮಾಡಿ ತಾಲ್ಲೂಕು ಪಂಚಾ­ಯಿತಿಗೆ ಒಪ್ಪಿಸ ಬೇಕೆಂದು ಸಭೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿತು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್‌ ಸಭೆಗೆ ತಿಳಿಸಿದರು. ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗರೊಬ್ಬರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸು­ತ್ತಿಲ್ಲ. ಅವರ ವರ್ತನೆ ಸರಿಪಡಿಸಿ ಕೊಳ್ಳುವಂತೆ ಸಭೆ ಎಚ್ಚರಿಕೆ ನೀಡಿತು.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಶಾಲೆಯ ಆಟದ ಮೈದಾನದ ಮಧ್ಯೆ ವಿದು್ಯತ್ ಮಾರ್ಗ ಹಾದು ಹೋಗಿದ್ದರೆ ಅದನ್ನು ಮೆಸ್ಕಾಂ ಇಲಾಖೆ ತನ್ನ ಸ್ವಂತ ವೆಚ್ಚದಲ್ಲಿ ಸ್ಥಳಾಂತರಿಸುವಂತೆ ಸೂಚಿಸಲಾಯಿತು. ಒಂದು ವೇಳೆ ವಿದು್ಯತ್ ಮಾರ್ಗ ತೆರವು­ಗೊಳಿದಿದ್ದರೆ ಮೆಸ್ಕಾಂ ಇಲಾಖೆಯ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಅಧ್ಯಕರು ಹೇಳಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಹಾಗೂ ಮೆಸ್ಕಾಂ ಎಂಜಿನಿಯರ್ ಸೇರಿ ಕೊಂಡು ತಾಲ್ಲೂಕಿನ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗೆ ವಿದು್ಯತ್ ಸಂಪರ್ಕ ಕಲ್ಪಿಸದಿರುವ ಘಟಕಗಳಿಗೆ ವಿದು್ಯತ್ ಸಂರ್ಪಕ ನೀಡಿ  ಸಮಸ್ಯೆ ಬಗೆಹರಿಸ ಬೇಕೆಂದು ಅಧಿಕಾರಿಗಳಿಗೆ  ಸಭೆಯಲ್ಲಿ ಸೂಚಿಸ ಲಾಯಿತು.

ತಾಲ್ಲೂಕಿನ 20 ಶಿಕ್ಷಕರ ಹುದ್ದೆ ಖಾಲಿ ಇವೆ. ಅತಿಥಿ ಶಿಕ್ಷಕರ ಹುದ್ದೆಗೆ ಒಟ್ಟು 96 ಅರ್ಜಿ ಬಂದಿದೆ. 56 ಜನ ಸ್ಥಳೀಯರು, ಉಳಿದವರು ಬೇರೆ ಕಡೆಯಿಂದ ಅರ್ಜಿ ಸಲ್ಲಿಸಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಮೇಶ್ ಮಾಹಿತಿ ನೀಡಿದರು.ಅಕ್ರಮ ಮದ್ಯ ಮಾರಾಟ ಮಾಡುವ ಸಾರ್ವಜನಿಕರಿಗೆ ಅನು­ಸರಿಸುವ ಕ್ರಮವನ್ನೆ ಅಂಗಡಿ­ಯವ­ರಿಗೂ ಅನುಸರಿಸ ಬೇಕೆಂದು ಕೃಷಿಕ ಸಮಾಜದ ಅಧ್ಯಕ್ಷ ವಿ.ನಿಲೇಶ್ ಒತ್ತಾಯಿಸಿದರು. ಅಬ್ಕಾರಿ ಅಧಿಕಾರಿ ಸಭೆ ಸೂಕ್ತ ಮಾಹಿತಿ ನೀಡದಿದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲು ಸಭೆ ನಿರ್ಧರಿಸಿತು.

ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಳಿ ಅಂಗಡಿಯಿಂದ ಗ್ರಾಮಸ್ಥರಿಗಾಗುತ್ತಿರುವ ತೊಂದರೆ ವಿಷಯ ಸಭೆಯಲ್ಲಿ ಪ್ರಸ್ತಾಪ­ವಾಯಿತು. ಇದಕ್ಕೆ ಕ್ರಮಕೈಗೊಳ್ಳು­ವಂತೆ ಸೂಚಿಸ­ಲಾಯಿತು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ, ಕಾರ್ಯ ನಿರ್ವಾಹಕ ಅಧಿಕಾರಿ ಸೀಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.