ADVERTISEMENT

`ದಕ್ಷರಾಜಕಾರಣಕ್ಕೆ ಮತ ನೀಡಿ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:54 IST
Last Updated 23 ಏಪ್ರಿಲ್ 2013, 9:54 IST
ಬೀರೂರು ಹೋಬಳಿ ಬಿ.ಕೋಡಿಹಳ್ಳಿಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಮಲ್ಲಿಕಾರ್ಜುನ ಪಾದಯಾತ್ರೆ ಮೂಲಕ ಮತಯಾಚಿಸಿದರು.
ಬೀರೂರು ಹೋಬಳಿ ಬಿ.ಕೋಡಿಹಳ್ಳಿಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಮಲ್ಲಿಕಾರ್ಜುನ ಪಾದಯಾತ್ರೆ ಮೂಲಕ ಮತಯಾಚಿಸಿದರು.   

ಬಿ.ಕೋಡಿಹಳ್ಳಿ(ಬೀರೂರು): ಸರ್ಕಾರಿ ಕಚೇರಿ ಅವಧಿ ಮುಗಿದ ಮೇಲೆ ನಡೆ ಯುವ ಕಚೇರಿ ಚಟುವಟಿಕೆ ಮಟ್ಟ ಹಾಕಲು ಮತ್ತು ದಕ್ಷ, ಸ್ವಚ್ಛ ಆಡಳಿತ ಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡ ಬೇಕೆಂದು ಕಡೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಮಲ್ಲಿಕಾರ್ಜುನ ಎಂದರು.

ಬೀರೂರು ಹೋಬಳಿ ಬಿ. ಕೋಡಿ ಹಳ್ಳಿಯಲ್ಲಿ ಸೋಮವಾರ ಮತ ಯಾಚಿಸಿ ಅವರು ಮಾತನಾಡಿದರು.
ಜನರು ನೀಡಿದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಬಿಜೆಪಿ ಯಿಂದ ಇಂದು ಜನರ ನೆಮ್ಮದಿ ಹಾಳಾಗಿದೆ. ಎಲ್ಲ ವರ್ಗಗಗಳು ಇಂದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಮುಂದಾಗಿದ್ದಾರೆ. ಉತ್ತಮ ಸರ್ಕಾರ ಬರಲು ಗಟ್ಟಿ ಮತಗಳು ಅವಶ್ಯ. ಪ್ರಚೋದನೆಗೆ ಒಳಗಾಗಿ ಮತ ನೀಡುವ ಬದಲು ಯೋಚಿಸಿ, ಜನಸಾಮಾನ್ಯರಿಗೆ ಕೇಂದ್ರಸರ್ಕಾರ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದೆ.

ರಾಜ್ಯದಲ್ಲಿ ಜನರ ಕೆಲಸವಾಗಬೇಕೆಂದರೆ ದಾರ್ಷ್ಟ್ಯ ಮನೋಭಾವದ ಸರ್ಕಾರ ತೊಲಗಿ ಜನಪರ ಸರ್ಕಾರ ಬರಬೇಕು ಎಂದರು. ಜಿ.ಪಂ.ಮಾಜಿ ಸದಸ್ಯ ಷಣ್ಮುಖಬೋವಿ ಮಾತನಾಡಿ, ಜೆಡಿಎಸ್ ಕೊಟ್ಟ ಮಾತಿನಂತೆ ನಡೆದಿದ್ದರೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತಿರಲಿಲ್ಲ. ರಾಜ್ಯಕ್ಕೆ ಮತ್ತು ಕ್ಷೇತ್ರಕ್ಕೆ ನಿಷ್ಠಾವಂತ ರಾಜಕಾರಣಿಗಳ ಅಗತ್ಯವಿದ್ದು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಮಲ್ಲಿಕಾರ್ಜುನರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಿ.ಜಿ.ಬಸಪ್ಪ, ಕೋಡಿಹಳ್ಳಿ ರಂಗಪ್ಪ, ಮರುಳಸಿದ್ದಪ್ಪ, ನಾಗರಾಜ್ ಮುಂತಾದವರು ಮಾತನಾಡಿದರು.

ಮುಖಂಡರಾದ ಎಚ್.ಹಾಲಪ್ಪ, ಕೆ.ಎಲ್.ವಿಜಯಕುಮಾರ್, ಎಸ್.ಶರತ್, ಎಂ.ಪಿ.ಸುದರ್ಶನ್,ಕುಮಾರ ಸ್ವಾಮಿ, ವಿಶ್ವನಾಥ್, ಡಿ.ಆರ್.ಗುರುನಾಥ್, ಎಂ.ಪಿ.ದಯಾನಂದ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT