ADVERTISEMENT

ದತ್ತ ಜಯಂತಿ: ಪೀಠಕ್ಕೆ ಹರಿದು ಬಂದ ಕೇಸರಿ ಪಡೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 7:54 IST
Last Updated 17 ಡಿಸೆಂಬರ್ 2013, 7:54 IST
ಚಿಕ್ಕಮಗಳೂರು ಸಮೀಪದ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ದತ್ತ ಪೀಠದಲ್ಲಿ ಸೋಮವಾರ ದತ್ತ ಪಾದುಕೆಗಳ ದರ್ಶನಕ್ಕೆ ಬಂದಿದ್ದ ಮಹಿಳಾ ಭಕ್ತರು.
ಚಿಕ್ಕಮಗಳೂರು ಸಮೀಪದ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ದತ್ತ ಪೀಠದಲ್ಲಿ ಸೋಮವಾರ ದತ್ತ ಪಾದುಕೆಗಳ ದರ್ಶನಕ್ಕೆ ಬಂದಿದ್ದ ಮಹಿಳಾ ಭಕ್ತರು.   

ಚಿಕ್ಕಮಗಳೂರು:ಎತ್ತನೋಡಿದರತ್ತ ಹಸಿರುಕ್ಕುವ ಗಿರಿ ಮುಗಿಲು, ಗಿರಿಶೃಂಗ ವನ್ನು ಕೇಸರಿ ವರ್ಣದಿಂದ ಶೃಂಗರಿಸಿದಂತೆ ಕಾಣುತ್ತಿದ್ದ ಮಾಲಾ ಧಾರಿಗಳ ದಂಡು, ಗಿರಿಗವ್ವರವಿಡೀ ಮಾರ್ಧನಿಸುವಂತೆ ದತ್ತಾತ್ರೆಯರ ಭಜನೆ ಮತ್ತು ಜಯ ಘೋಷ ..... ಸೋಮವಾರ ಶ್ರೀ ಗುರು ಇನಾಂ ದತ್ತಾತ್ರೇಯ ಪೀಠ ಅಕ್ಷರಶಃ ಕೇಸರಿಪಡೆ (ದತ್ತ ಮಾಲಾ ಧಾರಿಗಳು)ಯ ಗರ್ಜನೆಗೆ ಸಾಕ್ಷಿಯಾಯಿತು.

ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ನೇತೃತ್ವದಲ್ಲಿ ನಡೆದ ದತ್ತ ಮಾಲಾ ಅಭಿಯಾನ ಮತ್ತು ದತ್ತ ಜಯಂತಿಗೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಯಿಂದ ಸಹಸ್ರಾರು ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು ಪೀಠಕ್ಕೆ ಬಂದಿದ್ದರು. ’ನಮ್ಮದು ನಮ್ಮದು ದತ್ತ ಪೀಠ ನಮ್ಮದು’ ’ದತ್ತ ಮಹಾ ರಾಜ್‌ ಕೀ ಜೈ.... ’ ಘೋಷಣೆ ಗಳನ್ನು ಕೂಗುತ್ತಾ ’ಪಂಜರ’ದಂತಹ ಬ್ಯಾರಿ ಕೇಡ್‌ ಮೂಲಕ ಗುಹೆ ಪ್ರವೇಶಿಸಿ ದತ್ತ ಪಾದುಕೆಗಳ ದರ್ಶನ ಪಡೆದರು.

ತಂತಿ ಬೇಲಿ ಮತ್ತು ಪೊಲೀಸರ ಭದ್ರತೆ ಭೇದಿಸಿ ಒಂದೆರಡು ಬಾರಿ ದತ್ತ ಮಾಲಾಧಾರಿಗಳು ನಿಷೇಧಿತ ಜಾಗಕ್ಕೆ ನುಗ್ಗಿ ಭಗವಾಧ್ವಜ ಕಟ್ಟಲು ನಡೆಸಿದ ಪ್ರಯತ್ನವನ್ನು ಪೊಲೀಸರು ವಿಫಲ ಗೊಳಿಸಿದರು. ಪೀಠದ ಮುಂದಿರುವ ಪೊಲೀಸ್‌ ಚೌಕಿಯ ವೈರ್‌ಲೇಸ್‌ ಗೋಪುರದ ಮೇಲೆ ಹತ್ತಿ ಭಗವಾಧ್ವಜ ಕಟ್ಟಿದ ಪ್ರಸಂಗ ನಡೆಯಿತು. ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಅಲ್ಲಿ ಕಟ್ಟಿದ್ದ ಭಗವಾಧ್ವಜ ತೆರವುಗೊಳಿಸಿದರು.

ದತ್ತಾತ್ರೇಯರ ಉತ್ಸವ ಮೂರ್ತಿಯ ಅಡ್ಡೆ ಹೊತ್ತಿದ್ದ ಮಾಲಾಧಾರಿಗಳು ತಂತಿ ಬೇಲಿ ಮತ್ತು ಪೊಲೀಸ್‌ ಸರ್ಪಗಾ ವಲು ಭೇದಿಸಿ ಪೀಠದ ಬಲ ಬದಿಯ ನಿಷೇಧಿತ ಜಾಗಕ್ಕೆ ನುಗ್ಗುವ ಪ್ರಯತ್ನ ನಡೆಸಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾ ಯಿತು. ಉನ್ಮಾದದಲ್ಲಿದ್ದ ಮಾಲಾಧಾ ರಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಬೇಲಿ ಹಾರಿ ಒಳ ನುಗ್ಗಿದ್ದ ಐದಾರು ಮಂದಿ ಮಾಲಾಧಾರಿ ಗಳನ್ನು ಹೊರ ಹಾಕಲು ಮತ್ತು ನುಗ್ಗಲು ಯತ್ನಿಸುತ್ತಿದ್ದವರನ್ನು ಚದುರಿ ಸಲು ಪೊಲೀಸರು ಲಾಠಿ ಬೀಸಬೇ ಕಾಯಿತು. ಆಗ ಪೊಲೀಸರು ಮತ್ತು ಮಾಲಾಧಾರಿಗಳ ನಡುವೆ ನೂಕಾಟ ನಡೆಯಿತು.

ನಾಮಫಲಕಗಳಲ್ಲಿ ಇದ್ದ ಉರ್ದು ಭಾಷೆಯ ಶೀರ್ಷಿಕೆಗಳನ್ನು ಕಂಡು ದತ್ತ ಮಾಲಾಧಾರಿಗಳು ಆಕ್ರೋಶ ವ್ಯಕ್ತಪಡಿ ಸಿದ್ದರಿಂದ ಅಧಿಕಾರಿಗಳು, ನಾಮಫಲಕ ಗಳಲ್ಲಿದ್ದ ಉರ್ದು ಬರಹಗಳಿಗೆ ಕಾಗದ ಅಂಟಿಸಿ ಮರೆಮಾಚುವಂತೆ ಮಾಡಿ ದರು.

ಪೀಠದ ಸಮೀಪ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ತಾತ್ಕಾಲಿಕ ಸಭಾಂಗಣದಲ್ಲಿ ಅರ್ಚಕ ರಘು ಅವಧಾನಿ ಮತ್ತು ಶಿಷ್ಯ ವೃಂದದ ನೇತೃತ್ವದಲ್ಲಿ ಗಣಪತಿ ಹೋಮ, ದತ್ತ ಹೋಮ ನಡೆಯಿತು. ದತ್ತಾತ್ರೇಯರ ಉತ್ಸವ ಮೂರ್ತಿಗೆ ಪೂಜಾವಿಧಿ ವಿಧಾನಗಳನ್ನು ನಡೆಸ ಲಾಯಿತು. ನಂತರ ನಡೆದ ಪೂರ್ಣಾ ಹುತಿ ಹೋಮದಲ್ಲಿ ಕಲ್ಯಾಣ ನಗರದ ದೊಡ್ಡಕುರುಬರಹಳ್ಳಿ ಮಠದ ಜಯ ಬಸವಾನಂದ ಸ್ವಾಮೀಜಿ, ಶಂಕರದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಕಡೂರಿನ ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಬೆಂಗಳೂರಿನ ಶ್ರೀಧರಾ ಶ್ರಮದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿ ಗಳು, ಶಾಸಕ ಸಿ.ಟಿ.ರವಿ, ಬಜರಂಗದಳ ರಾಜ್ಯ ಸಂಚಾಲಕ ಸೂರ್ಯ ನಾರಾ ಯಣ, ವಿಎಚ್‌ಪಿ ಮುಖಂಡರು ಹಾಗೂ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ವಿವಿಧ ಮಠಗಳ ಸ್ವಾಮೀಜಿ ದತ್ತ ಪೀಠವನ್ನು ಹಿಂದೂಗಳ ಶ್ರದ್ಧಾ ಕೇಂದ್ರವಾಗಿ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಡೂರಿನ ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾಧ್ಯಮ ಪ್ರತಿನಿಧಿಗ ಳೊಂದಿಗೆ ಮಾತನಾಡಿ, ದತ್ತಾತ್ರೇಯನ ಮೂಲ ಸ್ಥಾನದಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ಅರ್ಚನೆಗೆ ಅವಕಾಶ ಸಿಗದಿರುವುದು ವಿಷಾದದ ಸಂಗತಿ. ಬಿಡಾರ ಹಾಕಿಕೊಂಡು ಹೋಮ ನಡೆ ಸುವಂತಾಗಿದೆ. ದತ್ತನ ಮೂಲ ಸ್ಥಾನ ದಲ್ಲೇ ಹೋಮ ಹವನಾದಿಗಳು ನಡೆ ಸಲು ಅವಕಾಶ ಸಿಗಬೇಕು. ಆದರೂ ಅಂತಿಮ ತೀರ್ಪು ಬರುವವರೆಗೂ ನ್ಯಾಯಾಲಯದ ಆದೇಶ ಪಾಲಿಸಲು ಬದ್ಧರಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.