ADVERTISEMENT

ಪರಿಸರ ಪ್ರಿಯರ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 6:08 IST
Last Updated 27 ಅಕ್ಟೋಬರ್ 2017, 6:08 IST
ನರಸಿಂಹರಾಜಪುರ ತಾಲ್ಲೂಕು ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಕ್ಕಿ ಗ್ರಾಮದಲ್ಲಿರುವ ಅಬ್ಬಿಗುಂಡಿ ಜಲಪಾತ.
ನರಸಿಂಹರಾಜಪುರ ತಾಲ್ಲೂಕು ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಕ್ಕಿ ಗ್ರಾಮದಲ್ಲಿರುವ ಅಬ್ಬಿಗುಂಡಿ ಜಲಪಾತ.   

ನರಸಿಂಹರಾಜಪುರ: ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಕ್ಕಿ ಗ್ರಾಮದಲ್ಲಿರುವ ಅಬ್ಬಿಗುಂಡಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪರಿಸರ ಪ್ರಿಯರನ್ನು ಆಕರ್ಷಿಸುತ್ತಿದೆ.

ಅಬ್ಬಿಗುಂಡಿ ಚೆಕ್ ಡ್ಯಾಂನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ತುಂಬಿದೆ. ಹಾಲ್ನೊರೆಯಂತೆ ನೀರು ಮೇಲಿಂದ ದುಮುಕುತ್ತಿರುವ ದೃಶ್ಯ ಮನ ಮೋಹಕವಾಗಿದೆ. ರಜೆಯನ್ನು ಮಜಾವಾಗಿ ಕಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವ ಜನಿಕರು ಬರುತ್ತಿದ್ದಾರೆ. ಮೈದುಂಬಿ ಹರಿಯುವ ನೀರು, ಪ್ರಕೃತಿ ದತ್ತವಾಗಿರುವ ಬಂಡೆಗಳು, ಸುತ್ತಲು ಹಚ್ಚ ಹಸಿರಿನಿಂದ ಕೂಡಿರುವ ಅರಣ್ಯ ಮೈ ರೋಮಾಂಚನ ಗೊಳಿಸುತ್ತಿದೆ.

ಹೋಗುವ ಮಾರ್ಗ: ತಾಲ್ಲೂಕಿನ ಗಡಿಭಾಗವಾದ ಕುದುರೆಗುಂಡಿಯಿಂದ 2 ಕಿ.ಮೀ ಸಾಗಿದರೆ ನಾಗರಮಕ್ಕಿ ಗ್ರಾಮ ಸಿಗುತ್ತದೆ. ಆ ಗ್ರಾಮ ದೇವಸ್ಥಾನ ಪಕ್ಕದಲ್ಲಿ ಹಾದು ಹೋಗುವ ರಸ್ತೆಯ ಮೂಲಕ 3 ಕಿ.ಮೀ ದೂರ ಚಲಿಸಿದರೆ, ಅಬ್ಬಿಗುಂಡಿ ಫಾಲ್ಸ್ ಸಿಗುತ್ತದೆ. ಅಲ್ಲದೆ, ತಾಲ್ಲೂಕಿನ ಬಿ.ಎಚ್.ಕೈಮರ ಗ್ರಾಮದ ಮೂಲಕ ಹಾದು ಹೋಗುವ ಹಳ್ಳಿ ಬೈಲು ರಸ್ತೆಯ ಮೂಲಕವು ಸಹ ಇಲ್ಲಿಗೆ ತಲುಪಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.