ADVERTISEMENT

ಬಹಿರಂಗ ಚರ್ಚೆಗೆ ಶಾಸಕ ಶ್ರೀನಿವಾಸ್ ಅಹ್ವಾನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 8:20 IST
Last Updated 25 ಡಿಸೆಂಬರ್ 2017, 8:20 IST

ಅಜ್ಜಂಪುರ: ತಾಲ್ಲೂಕಿನ ರಸ್ತೆ ಮತ್ತು ನೀರಾವರಿಗೆ ಕಾಮಗಾರಿಗೆ ₹900 ಕೋಟಿಗೂ ಅಧಿಕ ಅನುದಾನ ತಂದಿದ್ದು, ಈ ಬಗ್ಗೆ ಬಹಿರಂಗ ಚರ್ಚಿಸಲು ಸೋಮವಾರ ಸಂಜೆ 4ಕ್ಕೆ ತರೀಕೆರೆಯ ಪ್ರವಾಸಿ ಮಂದಿರಕ್ಕೆ ಬರುವಂತೆ ಶಾಸಕ ಜಿ.ಎಚ್.ಶ್ರೀನಿವಾಸ್ ಬಿಜೆಪಿ ಹಾಗೂ ಜೆಡಿಎಸ್‌ಗೆ ಮುಕ್ತ ಅಹ್ವಾನ ನೀಡಿದ್ದಾರೆ.

‘ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ರಸ್ತೆ ಮತ್ತು ನೀರಾವರಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅನುದಾನವೂ ಬಿಡುಗಡೆ ಆಗಿತ್ತು. ಅದನ್ನೇ ಶಾಸಕ ಶ್ರೀನಿವಾಸ್ ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ’ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ನಾನು ಅಧಿಕಾರಕ್ಕೆ ಬಂದ ಮೇಲೆ ಯಾವ ನೀರಾವರಿ ಕಾಮಗಾರಿಗೆ ಕ್ಯಾಬಿನೇಟ್ ಅನುಮೋದನೆ ನೀಡಿದೆ, ಯಾವಾಗ ನೀಡಿದೆ, ಯಾವಾಗ ಬೋರ್ಡ್ ಕಂಟ್ರೋಲ್ ಅಂಕಿತ ನೀಡಿದೆ, ಯಾವಾಗ ಟೆಂಡರ್ ಆಗಿದೆ ಎಂಬುದನ್ನು ಆಧಾರ ಸಹಿತವಾಗಿ ನಿರೂಪಿಸುವುದಾಗಿ’ ತಿಳಿಸಿದರು.

‘ಈಗಾಗಲೇ ಎರಡು ಬಾರಿ ಬಹಿರಂಗ ಚರ್ಚೆಗೆ ದಿನಾಂಕ ನಿಗದಿಪಡಿಸಿದ್ದರೂ ಯಾರೊಬ್ಬರೂ ಚರ್ಚೆಗೆ ಬಂದಿಲ್ಲ. ಕೇವಲ ಆಧಾರರಹಿತವಾಗಿ ಹಾಗು ಸುಳ್ಳು ಆರೋಪಗಳನ್ನು ಮಾಡದೇ ತಮ್ಮೊಂದಿಗೆ ನೇರವಾಗಿ ಚರ್ಚೆಗೆ ಬರುವಂತೆ’ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.