ADVERTISEMENT

ಬಾಬಾಬುಡನ್‌ಗಿರಿಗೆ ಸೌಹಾರ್ದ ನಡಿಗೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 9:04 IST
Last Updated 29 ಡಿಸೆಂಬರ್ 2017, 9:04 IST

ಚಿಕ್ಕಮಗಳೂರು: ಕರ್ನಾಟಕ ಕೋಮುಸೌಹಾರ್ದ ವೇದಿಕೆಗೆ 15 ವರ್ಷ ಸಂದ ಅಂಗವಾಗಿ ನಗರದಲ್ಲಿ ಆಯೋಜಿಸಿರುವ ‘ಸೌಹಾರ್ದ ಮಂಟಪ– ಹಿಂದಣ ನೋಟ... ಮುಂದಣ ಹೆಜ್ಜೆ...’ ರಾಷ್ಟ್ರೀಯ ಸಮಾವೇಶದ ಭಾಗವಾಗಿ ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾಕ್ಕೆ ಸೌಹಾರ್ದ ನಡಿಗೆ ಏರ್ಪಡಿಸಲಾಗಿತ್ತು.

ನೂರಾರು ಮಂದಿ ಬಾಬಾಬುಡನ್‌ಗಿರಿಗೆ ತೆರಳಿ ಗುಹೆಯನ್ನು ವೀಕ್ಷಿಸಿದರು. ಗಿರಿಯಲ್ಲಿನ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡರು. ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಕೇಂದ್ರವನ್ನು ಸೌಹಾರ್ದ ಕೇಂದ್ರವಾಗಿ ಉಳಿಸಿಕೊಳ್ಳಬೇಕು. ಶಾಂತ ಕದಡುವ ಯತ್ನ ಮಾಡಬಾರದು’ ಎಂದರು. ಕೋಮುಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಇದ್ದರು.

ಇಂದು ನಗರಕ್ಕೆ ಜಿಗ್ನೇಶ್‌ ಮೇವಾನಿ

ADVERTISEMENT

ನಗರದ ಸುಭಾಷ್‌ ಚಂದ್ರಬೋಸ್‌ ಆಟದ ಮೈದಾನದಲ್ಲಿ ‘ಸೌಹಾರ್ದ ಮಂಟಪ– ಹಿಂದಣ ನೋಟ... ಮುಂದಣ ಹೆಜ್ಜೆ...’ ಸಮಾವೇಶದ ಸಮಾರೋಪ ಇಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಸಮಾರೋಪದಲ್ಲಿ ಸಮಾರಂಭದಲ್ಲಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಸಮಾರೋಪ ಭಾಷಣ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.