ADVERTISEMENT

ಬಿ ಫಾರಂ ಇರಿಸಿ ಪೂಜೆ: ಒಡೆಯದ ಒಂದು ಈಡುಗಾಯಿ, ಸಿಎಂ ಕೆಲ ಕ್ಷಣ ಭಾವುಕ

ಚಿಕ್ಕಮಗಳೂರು–ಉಡುಪಿ ಲೋಕಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 4:18 IST
Last Updated 19 ಮಾರ್ಚ್ 2019, 4:18 IST
ಕುಮಾರಸ್ವಾಮಿ ಅವರು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಇದ್ದಾರೆ
ಕುಮಾರಸ್ವಾಮಿ ಅವರು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಇದ್ದಾರೆ   

ಚಿಕ್ಕಮಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸೋಮವಾರ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.

ಶೃಂಗೇರಿ ಶಾರದಾಂಬೆ ಮತ್ತು ಗುರುಗಳ ಸನ್ನಿಧಿಯಲ್ಲಿ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಬಿ ಫಾರಂ ಇರಿಸಿ, ವಿಶೇಷಪೂಜೆ ಸಲ್ಲಿಸಲಾಯಿತು.

ತೋರಣ ಗಣಪತಿ ದೇವಾಲಯದ ಮುಂದೆ ಬಿ ಫಾರಂ ಇರಿಸಿ, ಒಂಬತ್ತು ಈಡುಗಾಯಿಗಳನ್ನು ಒಡೆದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆದರೆ, ಒಂದು ಈಡುಗಾಯಿ ಒಡೆಯಲಿಲ್ಲ. ಅದನ್ನು ನೋಡಿ ಮುಖ್ಯಮಂತ್ರಿ ಕೆಲ ಕ್ಷಣ ಭಾವುಕರಾದರು. ಬಳಿಕ ಪಟ್ಟಣದ ಕಾಳಿಕಾಂಬ ಮತ್ತು ದುರ್ಗಾಂಬ ದೇವಾಲಯಗಳಿಗೆ ತೆರಳಿ, ಪೂಜೆ ನೆರವೇರಿಸಿದರು.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಕುಟುಂಬದ ನಂಬಿಕೆಯಂತೆ ಶಾರದಾಂಬೆಯ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಚುನಾವಣೆ ಎಂಬ ಯುದ್ಧದಲ್ಲಿ ಹೋರಾಟ ಮಾಡಬೇಕಿದೆ. ನಿಖಿಲ್‌ ಮಾತ್ರವಲ್ಲ, ರಾಜ್ಯದ 28 ಕ್ಷೇತ್ರಗಳಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವರು. ಈ ಎಲ್ಲ ಕ್ಷೇತ್ರಗಳ ಹೋರಾಟಕ್ಕೆ ದೇವಿ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.