ADVERTISEMENT

ಭದ್ರಾ ಯೋಜನೆ ಕಾಮಗಾರಿ ತಡೆದು ಪ್ರತಿಭಟನೆ

ಈಡೇರದ ಭರವಸೆ ಹಿನ್ನೆಲೆ: ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 10:21 IST
Last Updated 4 ಜನವರಿ 2014, 10:21 IST

ಅಜ್ಜಂಪುರ: ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕಿಗೆ 5.5 ಟಿಎಂಸಿ ನೀರನ್ನು ಕಾಯ್ದಿರಿಸುವ ಬಗ್ಗೆ ಅಧಿಕೃತ ಆದೇಶ ಹೊರಡಿಸ ಲಾಗು ವುದು ಎಂದು ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಶಾಖೆಯ ಕಾರ್ಯಕರ್ತರು ಪಟ್ಟಣದಲ್ಲಿ ನಡೆಯುತ್ತಿರುವ ಭದ್ರಾ ಯೋಜನೆಯ ಕಾಮಗಾರಿಯನ್ನು ತಡೆದು ಶುಕ್ರವಾರ ಪ್ರತಿಭಟಿಸಿದರು.

ಏಳು ತಿಂಗಳ ಹಿಂದೆಯೇ ತಾಲ್ಲೂಕಿನ ಹಿತಕ್ಕಾಗಿ ನೀರನ್ನು ಕಾಯ್ದಿ ರಿಸುವ ಬಗ್ಗೆ ನೀರಾವರಿ ಸಚಿವ ಎಂ.ಬಿ. ಪಾಟೀಲ್‌ ಸೇರಿದಂತೆ ಯೋಜನೆಯ ಎಂಜಿನಿಯರ್‌ ಭರವಸೆ  ನೀಡಿದ್ದರು. ಆ ಬಗ್ಗೆ ಸರ್ಕಾರ ಅಧಿಕೃತ ಆದೇಶ  ಹೊರ ಡಿಸದ ಹೊರತು ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ರೈತ ಸಂಘದ ಮುಖಂಡರು ತಿಳಿಸಿದರು.

  ಯೋಜನೆಗಾಗಿ ಬೆಟ್ಟದಾವರೆಕೆರೆ ಗ್ರಾಮದ ಬಳಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸ್ಫೋಟಕ ಬಳಸುತ್ತಿದ್ದು, ಗ್ರಾಮದ ಮನೆಗಳು ಬಿರುಕುಗೊಂಡಿವೆ. ಸ್ಫೋಟಕದ ಶಬ್ದಕ್ಕೆ ಬೆದರಿರುವ ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಸೊಕ್ಕೆ, ತಿಮ್ಮಾಪುರ, ರಂಗಾಪುರ ಗ್ರಾಮಗಳತ್ತ ಬಂದಿದ್ದು, ಗ್ರಾಮಸ್ಥರು ಭಯ ಗೊಂಡಿ ದ್ದಾರೆ. ನೀರಿನ ಮೂಲ ಹಾಗೂ ಪರಿಸರ ಹಾಳು ಮಾಡುತ್ತಿ ರುವ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸರ್ಕಾರ ಕೂಡಲೇ ರೈತರ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಬೇಕು ಎಂದು ಸಂಘದ ಕಾರ್ಯಾಧ್ಯಕ್ಷ ಹಳಿ ಯೂರು ಸೋಮಶೇಖರಯ್ಯ ಆಗ್ರಹಿಸಿದರು.

ಅನ್ಯಾಯ ಆಗಿದೆ ಎಂದಾದರೆ ಜಿಲ್ಲಾ ಧಿಕಾರಿ, ತಹಶೀಲ್ದಾರ್‌ ಕಚೇರಿ ಮುಂ ಭಾಗ ಪ್ರತಿಭಟಿಸಿ, ಅದನ್ನು ಹೊರತು ಪಡಿಸಿ ಕಾಮಗಾರಿ ಸ್ಥಳಕ್ಕೆ ತೆರಳುವುದು, ಕಾಮಗಾರಿ ತಡೆಯುವ ಪ್ರಯತ್ನ ನಡೆಸಿದರೆ ಬಂಧಿಸಿ, ಪ್ರಕರಣ ದಾಖಲಿ ಸಲಾಗುವುದು ಎಂದು ಸ್ಥಳೀಯ ಪೋಲಿಸರ ಮೂಲಕ ಬೆದರಿ ಸುತ್ತಿರುವ ಸರ್ಕಾರ ನಮ್ಮ ನೀರಿನ ಹಕ್ಕಿನ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಅಧ್ಯಕ್ಷ ವಕೀಲ ಡಿ.ಸಿ.ಸುರೇಶ್‌ ದೂರಿದರು.

ಪೊಲೀಸರು ಬಂಧಿಸಿದರೂ, ಜಾಮೀನು ಪಡೆಯದೇ ಜೈಲಿನಲ್ಲಿಯೇ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ದೌರ್ಜನ್ಯ ಪೂರಿತವಾಗಿ ನಮ್ಮ ಶಾಂತಿ ಯುತ ಹೋರಾಟವನ್ನು ತಡೆಯಲು ಮುಂದಾದರೆ, ಇಡೀ ತಾಲ್ಲೂಕಿನ ರೈತರು, ವಿವಿಧ ಸಂಘಟನೆ, ಒಕ್ಕೂಟಗಳ ಸಹಕಾರದೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಆಗ ಆಗುವ ಅನಾಹುತ, ಪ್ರಾಣ ಹಾನಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.

ರೈತಸಂಘ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೊಕ್ಕೆ ನವೀನ್‌, ತಾಲ್ಲೂಕಿನ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿ, ವಿಶೇಷ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿರುವ ಶಾಸ ಕರಿಗೆ ಮುಂದಿನ ಚುನಾವಣೆಯಲ್ಲಿ ರೈತರು ಹಾಗೂ ಮತದಾರರು ಪಾಠ ಕಲಿಸಲಿದ್ದಾರೆ ಎಂದರು.

ಸಂಘಟನೆಯ ಡಿ ಹೊಸೂರು ಸಿದ್ದಪ್ಪ,  ಪುಟ್ಟಸ್ವಾಮಿ, ಅಬ್ಬಿನಹೊಳಲು ವೀರ ಭದ್ರಪ್ಪ ಸೇರಿದಂತೆ ಅನೇಕ ಮುಖಂ ಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರು. ಪಟ್ಟಣದ ಪೊಲೀಸ್‌ ಠಾಣಾಧಿ ಕಾರಿ ಲಿಂಗರಾಜು ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು, ಪರಿಸ್ಥಿತಿ ನಿಭಾಯಿ ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.