ADVERTISEMENT

ಭೂಸ್ವಾಧೀನ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:11 IST
Last Updated 5 ಏಪ್ರಿಲ್ 2013, 9:11 IST

ಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿ ಕಾರ ಉಪ್ಪಳ್ಳಿ ಮತ್ತು ಇಂದಾವರ ಗ್ರಾಮದಲ್ಲಿ ವಸತಿ ಬಡಾವಣೆ ನಿರ್ಮಿಸಲು ಮುಂದಾಗಿದ್ದು, ರೈತರು ಬೆಳೆದಿರುವ ಅಡಿಕೆ ತೋಟವನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ  ಕೈಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿವೆ.

ಈ ಎರಡು ಗ್ರಾಮಗಳಲ್ಲಿ  ರೈತರ ಜಮೀನನ್ನು ಗುರುತಿಸಿ ಭೂ ಸ್ವಾಧೀನ ಪ್ರಕ್ರಿಯೆಗೆ  ಚಾಲನೆ ನೀಡಿದೆ. ಆದರೆ ಇಂದಾವರ ಗ್ರಾಮದಲ್ಲಿ ಮೂರುಕಾಲು ಎಕರೆ ಪ್ರದೇಶ ಐ.ಆರ್.ಧರಣೇಶ್ ಮತ್ತು ಐ.ಆರ್. ಮಹೇಶ್  ಅವರಿಗೆ ಸೇರಿದೆ. ಉತ್ತಮ ಫಸಲು ಹೊಂದಿರುವ 20 ವರ್ಷ ಹಳೆಯ ಅಡಿಕೆ ತೋಟ ಇದೆ. ಈ ತೋಟವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಸಂಘದ ಮುಖಂಡರಾದ ಟಿ.ಎ. ಮಂಜುನಾಥ, ಕೆ.ಎಚ್.ಚಂದ್ರೇಗೌಡ, ಹಸಿರುಸೇನೆ  ಜಿಲ್ಲಾಧ್ಯಕ್ಷ ಎಚ್.ಕೆ.ಶಶಿಧರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ 2010ರಲ್ಲಿ ಸಿಡಿಎ ಆಯುಕ್ತರು ಮತ್ತು  ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಈ  ಜಮೀನನ್ನು ವಸತಿ ಬಡಾವಣೆ ಯೋಜನೆ ವ್ಯಾಪ್ತಿಯಿಂದ ಕೈಬಿಡುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜ ವಾಗಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.