ADVERTISEMENT

ಮತದಾನದ ಪೂರ್ವಭಾವಿ: ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 6:45 IST
Last Updated 15 ಏಪ್ರಿಲ್ 2018, 6:45 IST

ಬಾಳೆಹೊನ್ನೂರು: ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಶನಿವಾರ ಪಟ್ಟಣದಲ್ಲಿ ಸಿಆರ್ ಪಿಎಫ್ ಯೋಧರು ಹಾಗೂ ಪೊಲೀಸರು ಪಥಸಂಚಲನ ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸಿದರು.ಆರಂಭದಲ್ಲಿ ಕಡಬಗೆರೆಯಲ್ಲಿ ಸುಮಾರು 200ಕ್ಕೂ ಅಧಿಕ ಸಿಬ್ಬಂದಿ ಪಥಸಂಚಲನ ನಡೆಸಿ ಬಾಳೆಹೊನ್ನೂರಿಗೆ ಬಂದಿದ್ದರು.

ಪಟ್ಟಣದ ರೋಟರಿ ವೃತ್ತದಿಂದ ಪಥಸಂಚಲನ ಆರಂಭಿಸಿದ ಸಿಬ್ಬಂದಿ ಜೇಸಿ ವೃತ್ತದ ಮೂಲಕ ಕಡ್ಲೆಮಕ್ಕಿಗೆ ತೆರಳಿ ಅಲ್ಲಿಂದ ಮತ್ತೆ ಜೇಸಿ ವೃತ್ತಕ್ಕೆ ಬಂದು ರಂಭಾಪುರಿ ಪೆಟ್ರೋಲ್ ಬಂಕ್ ಗೆ ತಲುಪಿದರು.

ಅತ್ಯಾಧುನಿಕ ಆಯುಧಗಳನ್ನು ಹೊಂದಿದ್ದ ಸಿಆರ್ ಪಿಎಫ್ ನ ಸುಮಾರು 42 ಸಿಬ್ಬಂದಿ ಭಾಗವಹಿಸಿದ್ದರು.ಪಥಸಂಚಲನದ ನೇತೃತ್ವವನ್ನು ಕೊಪ್ಪ ಡಿವೈಎಸ್ ಪಿ ರವೀಂದ್ರನಾಥ ಎಸ್ ಜಹಗೀರದಾರ ಸಿಆರ್ ಪಿಎಫ್ ಕಮಾಂಡೆಂಟ್ ಡಾ.ದೀಪಕ್ ಕುಮಾರ್ ವಹಿಸಿದ್ದರು.

ADVERTISEMENT

ಪಥಸಂಚಲನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೊಪ್ಪ ಡಿವೈಎಸ್ಪಿ ರವೀಂದ್ರನಾಥ ಜಹಗೀರದಾರ, ಕೊಪ್ಪ ಉಪ ವಿಭಾಗದ ಎಲ್ಲಾ ಸಿಬ್ಬಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.ಮುಂದಿನ ದಿನಗಳಲ್ಲಿ ವಿಭಾಗದ ಎಲ್ಲಾ ಕಡೆಗಳಲ್ಲೂ ಪಥಸಂಚಲನ ನಡೆಸಲಾಗುವುದು.ಉಪವಿಭಾಗದ ಆರು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು ಸಿಆರ್ ಪಿಎಫ್ ಯೋದರೊಂದಿಗೆ ಪೊಲೀಸರೂ ತಪಾಸಣೆ ನಡೆಸಲಿದ್ದಾರೆ. ಚುನಾವಣಾ ಆಕ್ರಮಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು ಪ್ಲೇಯಿಂಗ್ ಸ್ಕ್ವಾಡ್ ರಚಿಸಲಾಗಿದೆ.ಚುನಾವಣೆ ಘೋಷಣೆಯಾದ ಬಳಿಕ ಹಲವು ಅಕ್ರಮ ಮಧ್ಯ ಪ್ರಕರಣ ದಾಖಲಿಸಿದ್ದು,ಪರವಾನಗಿ ರಹಿತ ಕೋವಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ವೃತ್ತ ನಿರೀಕ್ಷಕ ಜಗನ್ನಾಥ್, ಠಾಣಾಧಿಕಾರಿ ನವೀನ್ ಎಸ್ ನಾಯಕ್, ಕೆ.ಚಂದ್ರಶೇಖರ್,ಸಿಆರ್ ಪಿಎಫ್ ಪಿಎಸೈ ಉನ್ನಿಪಿಳ್ಳೈ ಇದ್ದರು.

ಅಡ್ಡಾದಿಡ್ಡಿ ಚಲನೆ : ಪಥಸಂಚಲನ ಜನರಲ್ಲಿ ವಿಶ್ವಾಸ ಮೂಡಿಸುವ ಬದಲು ಆಶ್ಚರ್ಯ ಮೂಡಿಸಿತು ಶಿಸ್ತಿನ ಸಿಪಾಯಿಗಳಾಗಿದ್ದ ಪೊಲೀಸರು ಹಾಗೂ ಯೋಧರು ಪಥಸಂಚಲನದ ವೇಳೆ ಚದುರಿದಂತೆ ಅಡ್ಡಾದಿಡ್ಡಿ ಚಲಿಸುವ ಮೂಲಕ ನೋಡುಗರಲ್ಲಿ ಆಶ್ಚರ್ಯ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.