ADVERTISEMENT

ಮತದಾನ ಪ್ರೇರಣೆಗೆ ವಿನೂತನ ಯತ್ನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 6:10 IST
Last Updated 8 ಏಪ್ರಿಲ್ 2013, 6:10 IST

ನರಸಿಂಹರಾಜಪುರ: ಚುನಾವಣಾ ಆಯೋಗ ಮತದಾನಕ್ಕೆ ಪ್ರೇರೇಪಿಸಲು ಹಲವು ವಿಧಾನ ಅನುಸರಿಸುತ್ತಿದೆ.  ಪಟ್ಟಣದ ವ್ಯಾಪ್ತಿಯಲ್ಲಿ ಗಂಟೆ ಗಾಡಿಯ ಮೂಲಕ ಕಸವಿಲೇವಾರಿ ಮಾಡುವ ಸಿಬ್ಬಂದಿ ಮೂಲಕ ಮತದಾನದಲ್ಲಿ ಭಾಗವಹಿಸಬೇಕೆಂಬ ಕರಪತ್ರಗಳನ್ನು ಮನೆ ಮನೆಗೆ ಹಂಚುತ್ತಿರುವುದು ಒಂದಾಗಿದೆ.

ಪಟ್ಟಣದಲ್ಲಿ ಬೆಳಿಗ್ಗೆ ಗಂಟೆ ಗಾಡಿಗೆ ಕಸ ಹಾಕಲು ಮನೆಯವರು ಹೋದರೆ ಪೌರ ಕಾರ್ಮಿಕರು ಮತದಾನದಕ್ಕೆ ಸಂಬಂಧಿಸಿದ ಎರಡು ಕರ ಪತ್ರಗಳನ್ನು ನೀಡಿ ನಂತರ ಕಸ ವಿಲೇವಾರಿ ಮಾಡುತ್ತಾರೆ.

ಒಂದು ಕರ ಪತ್ರದಲ್ಲಿ ಚುನಾವಣೆ ಯಲ್ಲಿ ಹಣ ಪಡೆದರೆ, ಹಣ ನೀಡಿದರೆ ಒಂದು ವರ್ಷ ಜೈಲು ಶಿಕ್ಷೆ ಎಂಬ ಒಕ್ಕಣಿಕೆ ಹೊಂದಿದೆ.  ಚುನಾವಣೆಯಲ್ಲಿ ಯಾವುದೇ ವ್ಯಕ್ತಿಗೆ ಬೆದರಿಸುವುದೂ ಅಥವಾ ಆಮಿಷ ಒಡ್ಡುವುದು ಅಪರಾಧ. ಇವರಿಗೂ ಒಂದು ವರ್ಷ ಸೆರೆಮನೆ ವಾಸವಾಗಬಹುದು. ಮತದಾರರೇ ಯಾವುದೇ ಆಮಿಷಗಳಿಗೆ ಬಲಿ ಯಾಗಬೇಡಿ, ಹಣ, ಉಡುಗೊರೆಗಳನ್ನು ಸ್ವೀಕರಿಸಿ ತೊಂದರೆಗೊಳಗಾಗ ಬೇಡಿ ಎಂದು ತಿಳಿಸಲಾಗಿದೆ.

ಇನ್ನೊಂದು ಕರ ಪತ್ರದಲ್ಲಿ ಮತದಾನದ ಮಹತ್ವವನ್ನು ಸಾರುವ `ಮತದಾನ ಮಾಡಿದವನೇ ಜಾಣ', `ಮುಕ್ತಮತದಾನ ಸ್ವಚ್ಛ ಪ್ರಜಾ ಪ್ರಭುತ್ವಕ್ಕೆ ವರದಾನ' ಇತ್ಯಾದಿ ಘೋಷಣೆಗಳನ್ನು ಒಳಗೊಂಡಿದೆ.

ಮತದಾನಕ್ಕೆ ಪ್ರೇರೇಪಿಸಲು ಈ ಬಾರಿ ಚುನಾವಣಾ ಆಯೋಗ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಉಪನ್ಯಾಸ ಕಾರ್ಯಕ್ರಮ, ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರ ಮೂಲಕ ಜಾಗೃತಿ ಜಾಥ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.