ADVERTISEMENT

`ಮತ ಚಲಾಯಿಸಿ ಪ್ರಜಾತಂತ್ರ ಗಟ್ಟಿಗೊಳಿಸಿ'

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 8:19 IST
Last Updated 10 ಏಪ್ರಿಲ್ 2013, 8:19 IST

ತರೀಕೆರೆ: ಪ್ರಜಾತಂತ್ರ ವ್ಯವಸ್ಥೆಯಲ್ಲಿ  ಮತದಾನದ ಹಕ್ಕನ್ನು  ಪ್ರತಿಯೊಬ್ಬರು  ಚಲಾಯಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತೆ  ಉಪ ವಿಭಾಗಾಧಿಕಾರಿ ಜಿ. ಅನುರಾಧಾ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವಕೇಂದ್ರ, ಚಿಕ್ಕಮಗಳೂರು, ಕನ್ನಡ ಯುವಕಸಂಘ, ಜನಚಿಂತನ ಸಂಸ್ಥೆ, ತುಂಗಭದ್ರ ಶಿಕ್ಷಣ ಸಂಸ್ಥೆ ಆಶ್ರಯ ದಲ್ಲಿ  ಮಂಗಳವಾರ ಆಯೋಜಿಸಿದ್ದ ಮತದಾರರ ಜಾಗೃತ ಆಂದೋಲನ  ಉದ್ಘಾಟಿಸಿ ಅವರು ಮಾತನಾಡಿದರು.

ಮೂರು ಸ್ತರದ ವ್ಯವಸ್ಥೆಯಲ್ಲಿ ಶಾಸಕಾಂಗ ಸಮಾಜಕ್ಕೆ ಬೇಕಾಗುವ ವ್ಯವಸ್ಥೆಯನ್ನು ರೂಪಿಸುವ  ವಿಶಿಷ್ಟ ಅಧಿಕಾರ ಹೊಂದಿದ್ದು, ಅಲ್ಲಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಪ್ರತಿ ಮತದಾ ರರದ್ದಾಗಿದೆ. ಈ ಕರ್ತವ್ಯವನ್ನು ಜವಾಬ್ದಾರಿಯಿಂದ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲ ಉತ್ತಮ ಸರ್ಕಾರ ರಚನೆಗೆ ಕೊಡುಗೆ ನೀಡ ಬೇಕೆಂದು ತಿಳಿಸಿದರು.

ಆರಕ್ಷಕ ಉಪ ಅಧೀಕ್ಷಕ ಸದಾನಂದ್ ಬಿ ನಾಯಕ್ ಮಾತನಾಡಿ,  ಸಮಾಜದಲ್ಲಿ  ಅವ್ಯವಸ್ಥೆಯನ್ನು ಸರಿ ಪಡಿಸಲು ನೂರಕ್ಕೆ ನೂರರಷ್ಟು ಮತದಾನವಾಗುವಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ  ಇದೆ ಎಂದು ತಿಳಿಸಿದರು.

  ಚುನಾವಣಾ ಸಂದಂರ್ಭದಲ್ಲಿ  ಎಲ್ಲಿಯೇ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸರಿ ಗಾಗಲಿ ಅಥವಾ ಚುನಾವಣೆ ಅಧಿಕಾರಿ ಗಳ ಗಮನಕ್ಕೆ  ತರುವ ಮೂಲಕ  ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯಲು ಸಹಕರಿಸಬೇಕೆಂದು ತಿಳಿಸಿದರು.   ಕಾರ್ಯಕ್ರಮದಲ್ಲಿ ಹಿರಿಯ ಪತ್ರ್ರಕರ್ತ ಅನಂತ ನಾಡಿಗ್ , ಕಾಲೇಜಿನ ಪ್ರಾಚಾರ್ಯ ಶ್ರಿನಿವಾಸ್, ಜನ ಚಿಂತನ ಸಂಸ್ಥೆಯ ಎನ್.ವೀರಭದ್ರಪ್ಪ  ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.