ADVERTISEMENT

ಯುವಶಕ್ತಿ ಒಗ್ಗೂಡಿದರೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 10:20 IST
Last Updated 2 ಮಾರ್ಚ್ 2011, 10:20 IST

ಶೃಂಗೇರಿ : ಯುವಶಕ್ತಿ ಒಗ್ಗೂಡಿ ಶ್ರಮಿಸಿದರೆ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ಶಿವಶಂಕರ್ ತಿಳಿಸಿದರು.ತಾಲ್ಲೂಕಿನ ಕುಂಚೇಬೈಲ್  ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಯುವಜನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಸಮುದಾಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಶಾಲೆಗೆ ಆ ಹಣ ವರ್ಗಾಯಿಸಿ ಅದೇ ಅನುದಾನ ಶಾಲಾಭಿವೃದ್ಧಿ ಸಮಿತಿ ಹಾಗೂ ಯುವಕ ಸಂಘದ ಪ್ರತಿಷ್ಠೆಗೆ ಬಲಿಯಾ ಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುಂದರೇಶ್ ಮಾತನಾಡಿ, ಲಾಭ-ನಷ್ಟದ ಲೆಕ್ಕಾಚಾರದಲ್ಲಿರುವ ಯುವಕರು ಇಂತಹ ಮೇಳಗಳತ್ತ ಆಗಮಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್. ಎಂ. ಅರುಣ್‌ಕುಮಾರ್ ಮಾತನಾಡಿದರು. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಾ.ಯುವಜನ ಒಕ್ಕೂಟ, ಪ್ರಜ್ಞಾಯುವಕ ಸಂಘ ಕುಂಚೇಬೈಲ್ ಹಾಗೂ ಸ್ಫೂರ್ತಿ ಯುವಕ ಸಂಘ ಗೋಚವಳ್ಳಿ ಪ್ರಾಯೋಜ ಕತ್ವದಲ್ಲಿ ನಡೆದ ತಾಲ್ಲೂಕು ಯುವಜನ ಮೇಳದ ಉದ್ಘಾಟನಾ ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಗೀತಾಶ್ರೀನಿವಾಸ್ ನಾಯಕ್, ಮಂಜುಳಾ ಜಯಮೂರ್ತಿ, ಮೆಣಸೆ ಗ್ರಾಮ ಪಂಚಾಯಿತಿ ಸದಸ್ಯರು ನಾಗೇಶ್ ನಾಯ್ಕಾ, ಸುಷ್ಮಾ ಶಾಮಣ್ಣ, ಒಕ್ಕೂಟದ ಕಾರ್ಯದರ್ಶಿ ಕಿರಣ್ ಡೊಂಗ್ರೆ, ಯುವಕ ಸಂಘದ ಪದಾಧಿಕಾರಿ ಗಳಾದ ಆದೇಶ, ವಿಶ್ವಾಸ್ ಡೊಂಗ್ರೆ, ಶಿವಣ್ಣ, ಆದಿತ್ಯ, ಗಣೇಶ್‌ಮೂರ್ತಿ, ಅಮೃತ ನಾಗ್, ಜಗದೀಶ್ ಕಣದಮನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.