ADVERTISEMENT

ರಾಷ್ಟ್ರಭಕ್ತಿ-ಸ್ವಾಭಿಮಾನ ಬೆಳೆದು ಬರಲಿ:ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 9:10 IST
Last Updated 17 ಆಗಸ್ಟ್ 2012, 9:10 IST

ಬಾಳೆಹೊನ್ನೂರು: ಯುವ ಜನಾಂಗದಲ್ಲಿ ರಾಷ್ಟ್ರಭಕ್ತಿ- ಸ್ವಾಭಿಮಾನ ಬೆಳೆಸಿ ಕೊಳ್ಳುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಿದೆ. ಸ್ವಾತಂತ್ರ್ಯ ಪ್ರಾಪ್ತಿಗಾಗಿ ಹೋರಾಟ ನಡೆಸಿದವರ ತ್ಯಾಗ ಔದಾರ್ಯವನ್ನು ಯಾರೂ ಮರೆಯ ಬಾರದು ಎಂದು  ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ಇಲ್ಲಿನ ರಂಭಾಪುರಿ ಪೀಠದ ಜಗ ದ್ಗುರು ರುದ್ರ ಮುನೀಶ್ವರ ವಸತಿ ಪ್ರೌಢಶಾಲೆ ಮತ್ತು ವೀರಭದ್ರಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಯುಕ್ತವಾಗಿ ಎರ್ಪಡಿಸಿದ್ದ 66ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೇರವೇರಿಸಿ ಮಾತನಾ ಡಿದರು. 

ಹೂಲಿ ಹೀರೆಮಠದ ಶಿವಮಹಾಂತ ಶಿವಾಚಾರ್ಯ, ಹಲ ಗೂರು ಬೃಹನ್ಮಠದ ರುದ್ರಮುನಿ ಶಿವಾ ಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಮಖ್ಯಶಿಕ್ಷಕ ಸದಾನಂದ, ಕಟ್ಟೇಗೌಡ, ವೀರೇಶ ಕುಲಕರ್ಣಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.