ADVERTISEMENT

ಲೋಕಾಯುಕ್ತ ಡಿವೈಎಸ್‌ಪಿ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 5:45 IST
Last Updated 4 ಅಕ್ಟೋಬರ್ 2012, 5:45 IST

ನರಸಿಂಹರಾಜಪುರ: ತಾಲ್ಲೂಕು ಕೇಂದ್ರಕ್ಕೆ ಬುಧವಾರ ಆಗಮಿಸಿದ ಲೋಕಾಯುಕ್ತ ಡಿವೈಎಸ್‌ಪಿ ಎಚ್. ಎಲ್.ಶಿವಬಸಪ್ಪ ನೇತೃತ್ವದ ತಂಡ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿತು.

ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ತಂಡ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತಡಿಸಿತು. ಹೆರಿಗೆ ವಾರ್ಡ್‌ನಲ್ಲಿ ಸ್ವಚ್ಛತೆ ಇಲ್ಲವಾಗಿದ್ದು, ಮಗು ಮತ್ತು ಬಾಣಂತಿಯರು ಕಸದ ನಡುವೆ ಇರುವ ಸ್ಥಿತಿ ನಿರ್ಮಾಣವಾಗಿದೆ. ಕಿಟಕಿಗಳಿಗೆ ಗಾಜುಗಳು ಇಲ್ಲವಾಗಿವೆ. ಸ್ವಚ್ಛತೆ ಕಾಪಾಡುವಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಲೋಕಾಯುಕ್ತ ಅಧಿಕಾರಿ ಕಿಡಿಕಾರಿದರು.

ಕಂದಾಯ ಇಲಾಖೆಗೆ ಭೇಟಿ ನೀಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನದ ಕಡತ ಪರಿಶೀಲಿಸ ಲಾಯಿತು. ತಾಂತ್ರಿಕ ಕಾರಣದಿಂದ  2005-06ರಿಂದ ಖಾತೆ ಬದಲಾ ವಣೆಯಲ್ಲಿ ಕಡತ ವಿಲೇವಾರಿಯಾಗಿಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ ಎಂದು ಅಧಿಕಾರಿ ಹೇಳಿದರು.

ಸಹಾಯಕ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿದ ತಂಡ ಅಲ್ಲಿಅಧಿಕಾರಿ ಜಿಲ್ಲೆಯಲ್ಲಿ ಸಭೆಗೆ ತೆರಳಿದ್ದರಿಂದ ಯಾವುದೇ ಕಡತ ಪರಿಶೀಲಿಸಲಿಲ್ಲ. ಲೋಕಾಯುಕ್ತ ಡಿವೈಎಸ್‌ಪಿ ಎಚ್.ಎಲ್‌ಶಿವಬಸಪ್ಪ, ಇನ್ಸ್‌ಪೆಕ್ಟರ್ ಗುರುರಾಜ್ ಹಾಗೂ ಸಿಬ್ಬಂದಿ ಇದ್ದರು.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.