ADVERTISEMENT

ವಾಡಿಕೆ ಮಳೆ ಪ್ರಮಾಣದಲ್ಲಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 7:30 IST
Last Updated 22 ಜೂನ್ 2011, 7:30 IST

ಚಿಕ್ಕಮಗಳೂರು: ಕಳೆದ ವರ್ಷ ಇದೇ ತಿಂಗಳ ಅಂತ್ಯಕ್ಕೆ ವಾಡಿಕೆ ಮಳೆ 2196 ಮಿ.ಮೀ.ಗೆ ಬದಲಾಗಿ 1686.8 ಮಿಲಿ ಮೀಟರ್ ಮಳೆಬಿದ್ದಿದ್ದರೆ, ಈ ವರ್ಷ ಇದೇ 20ಕ್ಕೆ 1789 ಮಿಲಿ ಮೀಟರ್ ಮಳೆ ಆಗಿದ್ದು, ಶೇ. 122.1ರಷ್ಟು ಮಳೆ ಬಿದ್ದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟು ವಾಡಿಕೆ ಮಳೆ ಪ್ರಮಾಣದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡುಬಂದಿದೆ.

ಕಳೆದ ಸಾಲಿನಲ್ಲಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 91 ಮಿಲಿ ಮೀಟರ್‌ಗೆ ಬದಲಾಗಿ 117.6ರಷ್ಟು, ಕಡೂರಿನಲ್ಲಿ 54ಕ್ಕೆ 49.4, ಕೊಪ್ಪ 526ಕ್ಕೆ 417.2, ಮೂಡಿಗೆರೆ 436ಕ್ಕೆ 320.7, ನರಸಿಂಹರಾಜಪುರ ತಾಲ್ಲೂಕಿನಲ್ಲಿ 267ಕ್ಕೆ 237, ಶೃಂಗೇರಿ 718ಕ್ಕೆ ಬದಲಾಗಿ 438.6, ಮತ್ತು ತರೀಕೆರೆಯಲ್ಲಿ 104ಕ್ಕೆ 106.7 ಮಿಲಿ ಮೀಟರ್ ಮಳೆಯಾಗಿತ್ತು.

ಈ ವರ್ಷ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಇದೇ ತಿಂಗಳ 20ರವರೆಗೆ ವಾಡಿಕೆ ಮಳೆ 61ಕ್ಕೆ ಬದಲಾಗಿ ಸರಾಸರಿ ಮಳೆ 82.7 ಮಿಲಿ ಮೀಟರ್, ಕಡೂರು 36ಕ್ಕೆ 41.4, ಕೊಪ್ಪ 351ಕ್ಕೆ 346, ಮೂಡಿಗೆರೆ 291ಕ್ಕೆ 515, ನರಸಿಂಹರಾಜಪುರ 178ಕ್ಕೆ 167.6, ಶೃಂಗೇರಿಯಲ್ಲಿ 479ಕ್ಕೆ ಬದಲಾಗಿ 542 ಹಾಗೂ ತರೀಕೆರೆ ತಾಲ್ಲೂಕಿನಲ್ಲಿ 69ಕ್ಕೆ ಬದಲಾಗಿ 92.7 ಮಿಲಿ ಮೀಟರ್ ಮಳೆಯಾಗಿದೆ. ಒಟ್ಟು 1789 ಮಿ.ಮೀ. ಬದಲಾಗಿ ಕೇವಲ 122.1 ಮಿಲಿ ಮೀಟರ್ ಮಳೆಬಿದ್ದಂತಾಗಿದೆ.

ADVERTISEMENT

ಜಿಲ್ಲೆಯಲ್ಲಿ ಮುಂಗಾರು ಮಳೆ ದಿನದಿಂದ ದಿನಕ್ಕೆ ಕ್ಷೀಣಿಸ ತೊಡಗಿದೆ. ಭಾನುವಾರ 106.8 ಮಿಲಿ ಮೀಟರ್  ಮಳೆಯಾಗಿದ್ದರೆ, ಸೋಮವಾರ ಮಳೆ ಪ್ರಮಾಣ 58.9 ಮಿಲಿ ಮೀಟರ್‌ಗೆ ಕ್ಷೀಣಿಸಿದೆ.

ಸೋಮವಾರದವರೆಗೆ ಕಳೆದ 24 ಗಂಟೆಗಳಲ್ಲಿ ಬಿದ್ದಿರುವ ಮಳೆ ಪ್ರಮಾಣ ಮಿಲಿ ಮೀಟರ್‌ಗಳಲ್ಲಿ ಇಂತಿದೆ. ತರೀಕೆರೆ ತಾಲ್ಲೂಕಿನ ತಣಿಗೆಬೈಲು 6.2, ಶೃಂಗೇರಿಯಲ್ಲಿ 4.3, ಕೆರೆಕಟ್ಟೆಯಲ್ಲಿ 7.2, ಕಿಗ್ಗ 7.8, ನರಸಿಂಹರಾಜಪುರ 5.2, ಬಾಳೆಹೊನ್ನೂರು 0.2, ಮೇಗರಮಕ್ಕಿ 3, ಕೊಪ್ಪ 8, ಜಯಪುರ 0.6, ಕಮ್ಮರಡಿ 6.8 ಹಾಗೂ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ 0.6, ಮಿಲಿ ಮೀಟರ್ ಮಳೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.