ADVERTISEMENT

ಸಚಿವ ಜೀವರಾಜ್ ವಿರುದ್ಧ ತನಿಖೆಗೆ ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 9:14 IST
Last Updated 13 ಡಿಸೆಂಬರ್ 2012, 9:14 IST

ಚಿಕ್ಕಮಗಳೂರು: ಎನ್.ಆರ್.ಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಬಗರ್‌ಹುಕುಂ ಸಮಿತಿ ಎಸಗಿರುವ ಅಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವ ರಾಜ್ ಸೇರಿದಂತೆ 13 ಮಂದಿ ವಿರುದ್ಧ ಖಾಸಗಿ ದೂರು ದಾಖಲಿಸಿಕೊಂಡಿರುವ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾ ಲಯ, ಲೋಕಾಯುಕ್ತ ಡಿವೈಎಸ್‌ಪಿ ಯಿಂದ ಹೆಚ್ಚಿನ ತನಿಖೆ ನಡೆಸಿ ತಿಂಗ ಳೊಳಗೆ ವರದಿ ಸಲ್ಲಿಸುವಂತೆ ಬುಧವಾರ ಆದೇಶ ನೀಡಿದೆ. 

ಎನ್.ಆರ್.ಪುರ ತಾಲ್ಲೂಕಿನ ರೈತ ವಾಸುದೇವ ಕೋಟ್ಯಾನ್ ಎಂಬುವವರು ಜಿಲ್ಲಾ ಉಸ್ತುವಾರಿ ಸಚಿವರು, ಐವರು ತಹಶೀಲ್ದಾರರು, ಪ್ರಮುಖ ಮೂವರು ಫಲಾನುಭವಿಗಳು ಹಾಗೂ ಬಗರ್‌ಹುಕುಂ ಸಮಿತಿ ಸದಸ್ಯರ ವಿರುದ್ಧ ಕಳೆದ ನವೆಂಬರ್ 30ರಂದು ಜಿಲ್ಲಾ ಲೋಕಾ ಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಡಿಸೆಂಬರ್ 3ರಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು, ಬುಧವಾರ (ಡಿ.12)ಕ್ಕೆ ವಿಚಾರಣೆ ಮುಂದೂಡಿದ್ದ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾ ಧೀಶ ಬಿ.ಎ.ಪಾಟೀಲ್, ಕೋಟ್ಯಾನ್ ಪರ ವಕೀಲ ಡಿ.ಬಿ. ಸುಜೇಂದ್ರ ಸಲ್ಲಿಸಿದ ದಾಖಲೆಗಳನ್ನು ಪರಿ ಶೀಲಿಸಿ, ಇದೊಂದು ವಿಚಾರಣೆಗೆ ಅರ್ಹ ವಾದ ಗಂಭೀರ ಪ್ರಕ ರಣವೆಂದು ಪರಿಗಣಿಸಿ, ಲೋಕಾ ಯುಕ್ತ ಡಿವೈಎಸ್‌ಪಿಯಿಂದ ಹೆಚ್ಚಿನ ತನಿಖೆ ನಡೆಸಿ 2013ರ ಜನವರಿ 11ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಿದರು.

2004ರಿಂದ 2010ರ ಅವಧಿ ವರೆಗೆ ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿದ್ದ ಕ್ಷೇತ್ರದ ಶಾಸಕರೂ ಆದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಡಿ.ಎನ್.ಜೀವರಾಜ್ ಹಾಗೂ ಸಮಿತಿ ಯ ಸದಸ್ಯರು ದಾಖಲೆ ಗಳನ್ನು ತಿದ್ದಿ ಫಲಾನುಭವಿ ಗಳಲ್ಲದ ವರನ್ನು ಸಾಗು ವಳಿ ಚೀಟಿಗಳ ಅರ್ಹರ ಪಟ್ಟಿಗೆ ಸೇರಿ ಸಿದ್ದಾರೆ. ಬಗರ್‌ಹುಕುಂ ಸಮಿತಿ ಸದಸ್ಯರು ತಮ್ಮ ಹೆಸರು, ಕುಟುಂಬದ ಸದ ಸ್ಯರು ಮತ್ತು ಸಂಬಂಧಿಕರ ಹೆಸರುಗಳನ್ನು ಪಟ್ಟಿಗೆ ಸೇರಿಸಿದ್ದಾರೆ. ಈ ಅವಧಿ ಯಲ್ಲಿ ಈ ಭಾಗದಲ್ಲಿ ಕೆಲಸ ಮಾಡಿರುವ ತಹಶೀಲ್ದಾರರು ಇದಕ್ಕೆ ಕೈಜೋ ಡಿಸಿ ್ದದಾರೆ ಎಂದು ಆರೋಪಿಸಿ ಕೋಟ್ಯಾನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.