ADVERTISEMENT

ಸ್ವಚ್ಛತೆಯಿಂದ ಆರೋಗ್ಯ ಕಾಪಾಡಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 10:15 IST
Last Updated 7 ಜುಲೈ 2012, 10:15 IST

ಕಡೂರು: ಮನುಷ್ಯನ ಬದುಕಿನಲ್ಲಿ ಆರೋಗ್ಯ ಜೀವನ ಶೈಲಿಗೆ ಮಹತ್ವ ಇದ್ದು, ಶುಚಿತ್ವ ಮತ್ತು ಸ್ವಚ್ಛತೆಯಿಂದ ಆರೋಗ್ಯ  ಕಾಪಾಡಿಕೊಳ್ಳುವಂತೆ ಮುಸಲಾಪುರ ಹಟ್ಟಿಯ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯ ಡಾ.ಮಧು ಕರೆ ನೀಡಿದರು.

ತಾಲ್ಲೂಕಿನ ಎಮ್ಮೆದೊಡ್ಡಿ ಪ್ರದೇಶದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯದಲ್ಲಿ ಶುಕ್ರ ವಾರ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ  ಅವರು ಮಾತನಾಡಿದರು. ವಿದ್ಯಾರ್ಥಿ ನಿಲಯದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಸೋಂಕು ರೋಗಗಳು( ಕಜ್ಜಿ, ಕುರ, ನೆಗಡಿ,)ಸುಲಭವಾಗಿ ಹಬ್ಬುವ ಸಾಧ್ಯತೆ ಇದ್ದು, ಮಕ್ಕಳು ಸ್ವಚ್ಛವಾಗಿ ಇರುವು ದರ ಮೂಲಕ ಈ ರೋಗಗಳನ್ನು ದೂರವಿಡಬಹುದಾಗಿದೆ ಎಂದು ಅವರು ಕಿವಿ ಮಾತು ಹೇಳಿದರು.

 ವಿದ್ಯಾರ್ಥಿನಿಲಯದ ಪಾಲಕ ಎಸ್.ರಾಜು ಮಾತನಾಡಿ , ವಿದ್ಯಾರ್ಥಿಗಳು ಶುಚಿತ್ವ ಕಾಪಾಡಿಕೊಳ್ಳಬೇಕು.  ವ್ಯಾಯಾಮ, ಯೋಗಾಸನ, ಧ್ಯಾನ ಮುಂತಾದ ಕ್ರಿಯೆಗಳಿಗೆ ಅವಕಾಶ ವಿದ್ದು, ಉತ್ತಮ ಆಹಾರ ನೀಡಲಾಗುತ್ತಿದೆ.
 
ಮಕ್ಕಳು ಸಕ್ರಿಯವಾಗಿ ಈ ಚಟುವಟಿಕೆಗಳನ್ನು ನಿರಂತರ ವಾಗಿಸಿಕೊಂಡು ಉತ್ತಮ ದೇಹದಾರ್ಢ್ಯದ ಜೊತೆಗೆ ಮಾನಸಿಕ ಸಮತೋಲನ ಕಾಪಾಡಿ ಕೊಳ್ಳಬಹುದು. ಶಿಕ್ಷಣವೂ ಆರೋಗ್ಯ ಕಾಪಾಡಿಕೊಳ್ಳುವ ವಿಧಾನ ಗಳನ್ನು ಕಲಿಸುತ್ತಿದ್ದು ಮಕ್ಕಳು ಗಮನವಿಟ್ಟು ಅಭ್ಯಾಸದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.40 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಸಲಹೆ ಸೂಚನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.