ADVERTISEMENT

ಹಳದಿ ಎಲೆರೋಗ ವರದಿ ಶೀಘ್ರ ಬಹಿರಂಗ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:10 IST
Last Updated 5 ಫೆಬ್ರುವರಿ 2011, 7:10 IST

ಚಿಕ್ಕಮಗಳೂರು: ಹಳದಿ ಎಲೆರೋಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡಿ ರುವ ವರದಿಯನ್ನು ಬಜೆಟ್‌ಗೆ ಮುಂ ಚಿತವಾಗಿ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಶೃಂಗೇರಿ ಶಾಸನ ಡಿ.ಎನ್.ಜೀವರಾಜ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ, ಕರ್ನಾಟಕ ಸೇರಿದಂತೆ ಅಡಿಕೆ ಬೆಳೆಯುವ ಪ್ರದೇಶಗಳ ಸಂಸದರು ಮತ್ತು ಶಾಸಕರು ಗಳ ನ್ನೊಳಗೊಂಡ ಸಮನ್ವಯ ಸಮಿತಿ ಯನ್ನು ರಚಿಸಿ, ಸಭೆ ನಡೆಸಿದ ಬಳಿಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಡಿಕೆ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿ ಸಲಾಗುವುದೆಂದು ಎಂದರು.

ಅಡಿಕೆಗೆ ತಗುಲಿರುವ ಹಳದಿ ಎಲೆರೋಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಗೋರಕ್ ಸಿಂಗ್ ನೇತೃತ್ವದ ತಂಡ ಸಲ್ಲಿಸಿರುವ ವರದಿಯನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಸಮನ್ವಯ ಸಮಿತಿ ನೇತೃತ್ವದಲ್ಲಿ ಒತ್ತಾಯಿಸಲಾಗುವುದು ಅವರು ನುಡಿದರು.

ಕೇಂದ್ರದಲ್ಲಿ ರೈಲ್ವೆಗೆ ಪ್ರತ್ಯೇಕ ಬಜೆಟ್ ಮಂಡಿ ಸುವ ವಿಚಾರದಲ್ಲಿ ಆರಂಭ ದಲ್ಲಿಯೇ ವಿರೋಧಗಳು ಕೇಳಿ ಬಂದಿದ್ದವು ಈಗ ರೈಲ್ವೆ ಇಲಾಖೆಗೆ ಹೆಚ್ಚಿನ ಉಪ ಯೋಗವಾಗಿದೆ. ರಾಜ್ಯ ದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ವಿಷಯ ವನ್ನು ಮುಖ್ಯಮಂತ್ರಿಗಳು ಪ್ರಕಟಿಸಿದಾಗ ವಿರೋಧ ಪಕ್ಷಗಳು ಸ್ವಾಗತಿಸುವ ಬದಲು ಟೀಕೆ ಮಾಡಿ ರುವುದು ಸರಿಯಲ್ಲವೆಂದು ಅವರು ಅಭಿಪ್ರಾಯಪಟ್ಟರು.

 ಬಜೆಟ್‌ಗೆ ಸಂಬಂಧಿಸಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕುರಿತಂತೆ ಇದೇ 6ರಂದು ಚಿಕ್ಕಮಗಳೂರಿನಲ್ಲಿ ಸಂಸದರು ಮತ್ತು ಶಾಸಕರು ಗಳನ್ನೊಳಗೊಂಡ ಸಭೆ ನಡೆಯಲಿದೆ. ಅಭಿವೃದ್ಧಿ ಕೆಲಸಗಳಲ್ಲಿ ಜಿಲ್ಲೆಗೆ ಪ್ರಾತಿ ನಿಧ್ಯ ನೀಡುವಂತೆ ಮುಖ್ಯ ಮಂತ್ರಿಗಳನ್ನು ಕೋರಲಾಗುವುದು ಅವರು ಹೇಳಿದರು.

ಶೃಂಗೇರಿಯಲ್ಲಿ ಆಯುರ್ವೇದ ವಿಶ್ವ ವಿದ್ಯಾಲಯ, ನರಸಿಂಹರಾಜ ಪುರದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಶಿವಮೊಗ್ಗ ದಲ್ಲಿ ವಿಮಾನ ನಿಲ್ದಾಣ ಆರಂಭವಾದರೆ ಶಿವಮೊಗ್ಗದಿಂದ ಶೃಂಗೇರಿ ರಸ್ತೆ ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯ ಮಂತ್ರಿಗಳ ಮುಂದೆ ಇಡಲಾಗುವುದು ಎಂದು ಅವರು ನುಡಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ನೆಮ್ಮದಿ ಹಾಗೂ ತೃಪ್ತಿ ತಂದಿವೆ. ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುವುದೇ ಜೆಡಿಎಸ್ ನಾಯಕರ ಮುಖ್ಯ ಕೆಲಸವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲವೆಂಬ ಭೀತಿ ಜೆಡಿಎಸ್ ನಾಯಕರನ್ನು ಕಾಡುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

ನರಸಿಂಹರಾಜಪುರ ಪಟ್ಟಣವನ್ನು ಸುಂದರಮಯವನ್ನಾಗಿಸಿ ಅದಕ್ಕೆ ಚೆಂದದ ಸ್ವರೂಪ ಕೊಡಬೇಕೆನ್ನುವ ಅಭಿಲಾಷೆ ಹೊಂದಿರುವುದಾಗಿ ತಿಳಿಸಿ ದರು. ವಿರೋಧ ಪಕ್ಷದ ಅಪಪ್ರಚಾರದ ನಡುವೆ ಅಭಿವೃದ್ಧಿ ಕೆಲಸಗಳಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ಮನ್ನಣೆ ನೀಡಿದ್ದಾರೆಂದು ಹೇಳಿದರು.

 ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳಾಗುತ್ತಿರುವುದರಿಂದ 9 ಜಿಲ್ಲಾಪಂಚಾಯಿತಿ ಕ್ಷೇತ್ರಗಳಲ್ಲಿ 8 ಹಾಗೂ ಕೊಪ್ಪ ತಾಪಂನಲ್ಲಿ 9, ಶೃಂಗೇರಿ ಮತ್ತು ನರಸಿಂಹರಾಜ ಪುರದಲ್ಲಿ ತಲಾ 5 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಅವರು ವಿಶ್ಲೇಷಿಸಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ, ಬಿಜೆಪಿ ಮುಖಂಡ ಕಣಿವೆ ವಿನಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.