ADVERTISEMENT

ಹಿಂದೂ ಸಮಾಜ ದುರ್ಬಲ: ಕಳವಳ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 6:35 IST
Last Updated 28 ಫೆಬ್ರುವರಿ 2011, 6:35 IST

ನರಸಿಂಹರಾಜಪುರ: ಜಗತ್ತಿಗೆ ಒಳಿತನ್ನು ಸಾರಿದ ಹಿಂದೂ ಸಮಾಜ ಪ್ರಸ್ತುತ ದಿನಗಳಲ್ಲಿ ದುರ್ಬಲವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಭಾಗದ ಪ್ರಾಂತಕಾರ್ಯವಾಹಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಳವಳ ವ್ಯಕ್ತಪಡಿಸಿದರು.ಹನುಮತ್ ಶಕ್ತಿ ಜಾಗರಣ ಸಮಿತಿಯಿಂದ ಶನಿವಾರ ಇಲ್ಲಿನ ಗಣಪತಿ ಪೆಂಡಾಲ್ ಪಕ್ಕದಲ್ಲಿ ಆಯೋಜಿಸಿದ್ದ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ವಿದೇಶಿ ಆಕ್ರಮಣಕ್ಕೆ ತುತ್ತಾಗಿದ್ದ ಭಾರತ ಅರ್ಧ ಭಾಗವನ್ನು ಶತ್ರುಗಳಿಗೆ ಬಿಟ್ಟುಕೊಟ್ಟಿದೆ. ದೇಶ ವಿಭಜನೆ ಮಾಡಿದ್ದರಿಂದ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳು ಭಾರತಕ್ಕೆ ಸಮಸ್ಯೆಯಾಗಿ ಕಾಡುತ್ತಿವೆ ಎಂದರು. ಆಶೀರ್ವಚನ ನೀಡಿದ ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀಗುಣನಾಥಸ್ವಾಮೀಜಿ ಹಿಂದೂ ಧರ್ಮವು ಸನಾತನ ಧರ್ಮವಾಗಿದ್ದು ಎಲ್ಲಾ ಹಿಂದುಗಳು ಸಂಕುಚಿತ ದೃಷ್ಟಿಯಿಂದ ಕೀಳಿರಿಮೆಯನ್ನು ಬಿಟ್ಟು ಮನುಕುಲವನ್ನು ಸ್ಥಾಪಿಸುವತ್ತ ಗಮನಹರಿಸಬೇಕೆಂದು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸೀತೂರಿನ ಪಗ್ರತಿಪರ ಕೃಷಿಕ ಎಸ್.ಡಿ.ವಿ.ಗೋಪಾಲ್‌ರಾವ್ ಹಿಂದೂ ಸಂಸ್ಕೃತಿಯನ್ನು ಉಳಿಸಲು ಬೆಳೆಸಲು ಹಾಗೂ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸಲು ಹಿಂದೂ ಸಮಾಜೋತ್ಸವ ಹಮ್ಮಿಕೊಂಡಿರುವು ದಾಗಿ ತಿಳಿಸಿದರು.ಹಿಂದೂ ಸಮಾಜೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಣಿವೆ ವಿನಯ್.ವಿವಿಧ ಸಮಾಜದ ಮುಖಂಡರಾದ ನವೀನ್ ಕುಮಾರ್, ನಾರಾಯಣ್, ಗುರುಮೂರ್ತಿ, ನಾಗರಾಜ್, ಗಣೇಶ್, ವೈ.ಎಸ್. ಮಂಜುನಾಥ್ ಲಾಡ್, ಗುಂಡಪ್ಪ, ಅಣ್ಣಪ್ಪ, ಡಿ.ಜಿ.ಕುಮಾರ್, ಶಾಂತರಾಜ್, ಶಂಕರಾಚಾರ್ಯ ಇದ್ದರು. ಕೃಷ್ಣಭಟ್ ಮತ್ತು ಸಂಗಡಿಗರು, ಗಜೇಂದ್ರ ಗೆರಸುಕೂಡಿಗೆ, ವಿನಯ್, ಆರ್.ಡಿ.ಮಹೇಂದ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.