ಕೊಪ್ಪ: ಪಟ್ಟಣದ ಸ್ವಚ್ಛತೆ, ಆರೋಗ್ಯ, ಸಮರ್ಪಕ ಕುಡಿಯುವ ನೀರು ನಿರ್ವಹಣೆ ಕುರಿತಂತೆ ಪ್ರತ್ಯೇಕ ಸಮಿತಿ ರಚಿಸಲಾ ಗಿದ್ದು, ಸಮಸ್ಯೆ ಪರಿಹಾ ರಕ್ಕೆ ಆದ್ಯತೆ ಮೇಲೆ ಕ್ರಮ ವಹಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಶ್ರೀನಿವಾಸ ಶೆಟ್ಟಿ ತಿಳಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣ ದಲ್ಲಿ ಪಟ್ಟಣದ ಸ್ವಚ್ಛತೆ ಮತ್ತು ನೀರು ನಿರ್ವಹಣೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ಪೌರ ಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪಟ್ಟಣಿಗರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ದೂರು ಗಳು ಬಂದಿದ್ದು, ಒಂದು ವಾರದೊಳಗೆ ಅದನ್ನು ಸರಿಪಡಿಸುವಂತೆ ನೀರು ನಿರ್ವಹಣಾ ಸಿಬ್ಬಂದಿಗೆ ಸೂಚಿಸಿ ದರು. ಸಿಗದಾಳು ಘಾಟ್‌ನಲ್ಲಿರುವ ಪಟ್ಟಣದ ಕಸ ವಿಲೇವಾರಿ ಘಟಕದಲ್ಲಿ ಕೋಳಿ ತ್ಯಾಜ್ಯವನ್ನು ಪ್ರತ್ಯೇಕ ಗುಂಡಿಗೆ ಹಾಕದೆ ಮಾಮೂಲಿ ಕಸದೊಂದಿಗೆ ರಾಶಿ ಹಾಕಿರುವುದರಿಂದ ದುರ್ನಾತ ಬೀರುತ್ತಿದ್ದು, ಪಕ್ಕದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಪ್ರಯಾಣಿಕರು ಮೂಗು ಮುಚ್ಚಿ ಕೊಂಡು ಸಾಗುವಂತಾಗಿದ್ದು, ವಾರ ದೊಳಗೆ ಸರಿಪಡಿಸುವಂತೆ ತಾಕೀತು ಮಾಡಿದರು. ಪಂಚಾಯಿತಿ ಕೆಲಸವನ್ನು ಸರಿಯಾಗಿ ನಿರ್ವಹಿಸದೆ ಖಾಸಗಿಯವರ ಕೆಲಸಕ್ಕೆ ತೆರಳುವ ಸಿಬ್ಬಂದಿ ಬಗ್ಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ದೇವೇಗೌಡ ಸರ್ಕಲ್ ಮತ್ತು ಇಂದಿರಾನಗರದ ಉದ್ಯಾನವನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ 30–40 ವರ್ಷಗಳಿಂದ ಖಾಲಿ ಬಿದ್ದಿರುವ ನಿವೇಶನಗಳಲ್ಲಿ ಬೆಳೆದಿರುವ ಗಿಡ ಗಂಟಿಗಳು, ಕಸ ವಿಲೇವಾರಿಗೆ ಸಾಕಷ್ಟು ನೋಟಿಸ್ ನೀಡಿದರೂ ಪ್ರಯೋಜನ ವಾಗದ ಕಾರಣ ಪಂಚಾಯಿತಿಯಿಂ ದಲೇ ಸ್ವಚ್ಛಗೊಳಿಸಿ ನಿವೇಶನ ಮಾಲೀಕರ ಖಾತೆಗೆ ಖರ್ಚು ಹಾಕಲಾಗುವುದು ಎಂದರು.
ಪೌರ ಕಾರ್ಮಿಕರಿಗೆ ಇನ್ನೊಂದು ವಾರದೊಳಗೆ 2 ಜೊತೆ ಖಾಕಿ ಸಮವಸ್ತ್ರ, ರೈನ್‌ಕೋಟ್, ಶೂ, ಗ್ಲೌಸ್ ನೀಡಲಾ ಗುವುದು. ವೇತನ ಹೆಚ್ಚಳದ ಬೇಡಿಕೆ ಯನ್ನು ಪಂಚಾಯಿತಿ ಸಭೆಯ ಮುಂದಿಟ್ಟು ಈಡೇರಿಸಲು ಪ್ರಯತ್ನಿಸುವು ದಾಗಿ ತಿಳಿಸಿದ ಅವರು, ಪಟ್ಟಣ ಪಂಚಾಯಿತಿಯಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಹಾಗೂ ಎಂಜಿನಿಯರ್ ಹುದ್ದೆಗಳು ಖಾಲಿಯಿದ್ದು, 25 ಸಿಬ್ಬಂದಿ ಕೊರತೆ ಇರುವುದರಿಂದ ಕಂದಾಯ, ತೆರಿಗೆ, ಬಾಡಿಗೆ ವಸೂಲಾತಿಗೆ ತೊಡ ಕಾಗಿದೆ. ಪ್ರಾಮಾಣಿಕ ಪಾವತಿದಾರರಿಗೆ ಶೇ 5 ರಿಯಾಯಿತಿ ನೀಡಲಾಗುವುದು ಹಿಂದಿನ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಪಟ್ಟಣ ಪಂಚಾಯಿತಿ ಪ್ರಶಸ್ತಿ ಬಂದಿದ್ದು, ಈ ಬಾರಿಯೂ ಅದೇ ಗುರಿ ಸಾಧನೆಗೆ ಪ್ರಯತ್ನ ನಡೆಸಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಅನುಸೂಯ ಕೃಷ್ಣಮೂರ್ತಿ, ಸದಸ್ಯರಾದ ಎ. ದಿವಾಕರ್, ಆಶಾ ಪೆರಿಸ್, ವಸಂತಿ, ಮುಖ್ಯಾಧಿಕಾರಿ ಎಂ.ಟಿ. ಶಂಕರಪ್ಪ ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.