ADVERTISEMENT

ಗ್ರಾಮದಲ್ಲಿ ಕಾಳಗದ ಹಬ್ಬದ ಸಂಭ್ರಮ

ಉತ್ಸವಮೂರ್ತಿ ಮೆರವಣಿಗೆಯಲ್ಲಿ ಭಕ್ತರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 7:16 IST
Last Updated 8 ಫೆಬ್ರುವರಿ 2023, 7:16 IST
ಬೈಗೂರು ಪಂಚಾಯಿತಿ ವ್ಯಾಪ್ತಿಯ ಹಂಗರವಳ್ಳಿ ಮತ್ತು ಹೊಲದ ಬೈಲು ಗ್ರಾಮಗಳ ಜನತೆ ಕಾಳಗದ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು
ಬೈಗೂರು ಪಂಚಾಯಿತಿ ವ್ಯಾಪ್ತಿಯ ಹಂಗರವಳ್ಳಿ ಮತ್ತು ಹೊಲದ ಬೈಲು ಗ್ರಾಮಗಳ ಜನತೆ ಕಾಳಗದ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು   

ಆಲ್ದೂರು: ಸಮೀಪದ ಬೈಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗರವಳ್ಳಿ ಮತ್ತು ಹೊಲದ ಬೈಲು ಗ್ರಾಮಗಳ ಸಹಭಾಗಿತ್ವದಲ್ಲಿ ಮಂಗಳವಾರ ಕಾಳಗದ ಹಬ್ಬದ ಜಾತ್ರಾ ಮಹೋತ್ಸವ ನಡೆಯಿತು.

ಕಾಳಗದ ಹಬ್ಬವು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇದಕ್ಕೆ ಗ್ರಾಮ ದೇವತೆಗಳು ಯುದ್ಧಕ್ಕೆ ಹೊರಡುವ ಹಬ್ಬವೆಂತಲೂ ಕರೆಯಲಾಗುತ್ತದೆ. ಈ ಹಬ್ಬದ ನಂತರ ಹೊಲದಲ್ಲಿ ಬೆಳೆದ ಹೊಸ ಫಸಲಿನ ಸುಗ್ಗಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಸುವುದು ವಾಡಿಕೆ ಎಂದು ಹೊಲದ ಬೈಲು ದಿಲೀಪ್ ಮಾಹಿತಿ ನೀಡಿದರು.

ಗ್ರಾಮ ದೇವತೆಗಳಾದ ನಾಲ್ಕೂ
ರಮ್ಮ, ದೇವಿರಮ್ಮ, ಉದ್ದಂಡೇಶ್ವರ, ಕೆಂಚರಾಯ ಸ್ವಾಮಿ, ಉತ್ಸವ ಮೂರ್ತಿಗಳ ಪೂಜೆ, ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಗ್ರಾಮದ ಕುಟುಂಬದ ಹಬ್ಬವಾಗಿದ್ದು, ದೂರದ ಊರಿನಲ್ಲಿರುವ ಸದಸ್ಯರೆಲ್ಲರೂ ಒಟ್ಟು ಸೇರಿ ಆಚರಿಸುತ್ತಾರೆ.

ADVERTISEMENT

ಮಕ್ಕಳಿಲ್ಲದ ಸ್ತ್ರೀಯರು ಹರಕೆ ಹೊತ್ತರೆ ಮಕ್ಕಳಾಗುವುದು ಮತ್ತು ಕಾಯಿಲೆಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ ಇದೆ.

ಧಾರ್ಮಿಕ ಆಚರಣೆಯ ಉಸ್ತುವಾರಿಯನ್ನು ಗ್ರಾಮಗಳ ಮುಖಂಡರಾದ ಉಮೇಶ್, ಎಚ್.ಕೆ. ಗೋಪಾಲಗೌಡ, ದಿಲೀಪ್ ಹೊಲದ ಬೈಲು, ದಿನೇಶ್ ಎಚ್.ಡಿ, ಧರ್ಮಚಾರು, ಎಚ್.
ಎಸ್. ಮಂಜುನಾಥ ಶೆಟ್ರು ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.