ಆಲ್ದೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಕಲಿಕೆಯ ಭಾಗವಾಗಿ ಅಣಕು ಸಂಸತ್ತಿನ ಕಾರ್ಯಕ್ರಮ ನಡೆಯಿತು.
ಸಮಾಜ ವಿಜ್ಞಾನ ಶಿಕ್ಷಕಿ ಜ್ಯೋತಿ ಸಿ.ಎಂ.ಮಾರ್ಗದರ್ಶನದಲ್ಲಿ ಅಣಕು ಸಂಸತ್ತು ಆಯೋಜನೆ ಮಾಡಲಾಗಿತ್ತು. ಸಭಾಪತಿಯಾಗಿ ವಿದ್ಯಾರ್ಥಿ ರಂಜಿತ್, ಆಡಳಿತ ಪಕ್ಷದ ನಾಯಕಿಯಾಗಿ ವಿದ್ಯಾರ್ಥಿನಿ ಕೀರ್ತಿ, ವಿರೋಧ ಪಕ್ಷದ ನಾಯಕಿಯಾಗಿ ವಿದ್ಯಾರ್ಥಿನಿ ಮುಮ್ತಾಜ್, ಜನರ ಸಮಸ್ಯೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಯಾಗಿ ವಿದ್ಯಾರ್ಥಿನಿ ಇಂಚರಾ, ಅರ್ಪಿತಾ ಚರ್ಚೆಯಲ್ಲಿ ಪಾಲ್ಗೊಂಡರು.
‘ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯ ರಾಜ್ಯಾಡಳಿತದ ಸಂವಿಧಾನಾತ್ಮಕ ರಾಜಕೀಯ ಪರಿಕಲ್ಪನೆಯ ಅರಿವನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಸತ್ತಿನಲ್ಲಿ ಸದಸ್ಯರ ಸಭಾಪತಿಗಳ ಕರ್ತವ್ಯಗಳು ಹಾಗೂ ಸಭೆಯ ನಡಾವಳಿಗಳ ಕುರಿತ ಸಮಗ್ರ ಚಿತ್ರಣವುಳ್ಳ ಅಣಕು ಪ್ರದರ್ಶನ ಇದಾಗಿತ್ತು’ ಎಂದು ಶಿಕ್ಷಕಿ ಜ್ಯೋತಿ ತಿಳಿಸಿದರು.
ವಿಜ್ಞಾನ ಶಿಕ್ಷಕ ಮುಜಾಮಿಲ್, ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.