ADVERTISEMENT

ಆಲ್ದೂರು | ನ್ಯಾಯಮೂರ್ತಿ ಮೇಲೆ ಶೂ ಎಸೆತ: ಘಟನೆ ಖಂಡಿಸಿ ಪಂಜಿನ ಮೆರವಣಿಗೆ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತಯಲು ಯತ್ನಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:12 IST
Last Updated 10 ಅಕ್ಟೋಬರ್ 2025, 7:12 IST
ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ಪಟ್ಟಣದಲ್ಲಿ ದಲಿತಪರ ಸಂಘಟನೆಗಳಿಂದ ಪಂಚಿನ ಮೆರವಣಿಗೆ ನಡೆಯಿತು
ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ಪಟ್ಟಣದಲ್ಲಿ ದಲಿತಪರ ಸಂಘಟನೆಗಳಿಂದ ಪಂಚಿನ ಮೆರವಣಿಗೆ ನಡೆಯಿತು   

ಆಲ್ದೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ಅಂಬೇಡ್ಕರ್ ಹೋರಾಟ ವೇದಿಕೆ ಮತ್ತು ದಲಿತ ಪರ ಸಂಘಟನೆಗಳು ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಮುಖ್ಯಬೀದಿಗಳಲ್ಲಿ ಸಾಗಿತು.

ಮುಖಂಡ ಹೆಡದಾಳು ಕುಮಾರ್ ಮಾತನಾಡಿ, ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್‌ನನ್ನು ಬಂಧಿಸಿ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಡಿಎಸ್ಎಸ್ ಹಿರಿಯ ಮುಖಂಡ ಯಲಗುಡಿಗೆ ಹೊನ್ನಪ್ಪ, ಹಿಂದುತ್ವದ ಪರಿಕಲ್ಪನೆ ಆಧಾರದಲ್ಲಿ ಅಧಿಕಾರ ಹಿಡಿದು ಹಿಂದೂ ರಾಷ್ಟ್ರ ಮಾಡುವ ದುರುದ್ದೇಶದಿಂದ ಆ‌ರ್‌ಎಸ್ಎಸ್ ಮತ್ತು ಬಿಜೆಪಿ ಈ ಕೃತ್ಯಗಳನ್ನು ವ್ಯವಸ್ಥಿತವಾಗಿ ನಡೆಸಲು ಷಡ್ಯಂತ್ರ ರೂಪಿಸುತ್ತಿದೆ. ಇಂಥ ಕೃತ್ಯ ಮಾಡಿದ ವಕೀಲನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದರು.

ಜಿಲ್ಲಾ ದೌರ್ಜನ್ಯ ವಿರೋಧಿ ಸಮಿತಿ ಸದಸ್ಯ ಹುಣಸೆಮಕ್ಕಿ ಲಕ್ಷ್ಮಣ್, ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜು, ಎಚ್. ಮಾತನಾಡಿ, ರಾಜಕಾರಣಿಗಳ ಮೇಲೆ ಹಲ್ಲೆ ನಡೆದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಈ ವ್ಯವಸ್ಥೆ ಸಿಜೆಐ ಮೇಲೆ ಇಂಥ ಕೃತ್ಯ ಎಸಗುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದರು.

ಡಿಎಸ್ಎಸ್ ಜಿಲ್ಲಾ ಮುಖಂಡ ಪುರ ಚಂದ್ರಶೇಖರ್, ಉಮೇಶ್ ದೇವರಹಳ್ಳಿ, ಹೆಡದಾಡು ಪುಟ್ಟರಾಜು, ಸಂತೆ ಮೈದಾನ ಕೃಷ್ಣಕುಮಾರ್, ದೋಣಗುಡಿಗೆ ನಾಗೇಶ್, ಸತ್ತಿಹಳ್ಳಿ ಯೋಗೇಶ್, ಗಣೇಶ್ ಕಠಾರದಹಳ್ಳಿ, ಜೋಳದಾಳು ಮಂಜುನಾಥ್, ಬಸಕೋಡು ರಮೇಶ್, ತುಂಬಳ್ಳಿ ಉಮೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಕಠಾರದಹಳ್ಳಿ, ಭದ್ರೇಶ್ ಚಿಕ್ಕಮಾಗರವಳ್ಳಿ, ನೊಜ್ಜೆಪೇಟೆ ಜಗದೀಶ್, ಕೃಷ್ಣಪ್ರಸಾದ್ ಕೂದುವಳ್ಳಿ, ಪಂಚಾಯಿತಿ ಸದಸ್ಯರಾದ ಗೋಪಾಲ್, ಹವ್ವಳ್ಳಿ ಸವಿತಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.