ಆಲ್ದೂರು: ಸಮೀಪದ ಕಣತಿ ಬೆಟ್ಟದಹಳ್ಳಿ ಗ್ರಾಮದ ಸೋಮಶೇಖರ್ ಎಂಬುವರ ಕಾಫಿ ತೋಟಕ್ಕೆ ಬೆಳಗಿನ ಜಾವ ಕಾಡಾನೆ ನುಗ್ಗಿ 7 ತೆಂಗಿನಮರ, 3 ಅಡಿಕೆ ಮರಗಳನ್ನು ನೆಲಕ್ಕುರುಳಿಸಿದೆ.
ಸಮೀಪದ ಕಸ್ಕೆಮನೆ ಅರಣ್ಯ ಪ್ರದೇಶದಿಂದ ಆನೆ ಆಗಾಗ ಬಂದು ಬೆಳೆ ಹಾನಿ ಮಾಡುತ್ತಿದೆ. ತೋಟದಲ್ಲಿ ಕಾರ್ಮಿಕರನ್ನು ಇಟ್ಟು ಕೆಲಸ ಮಾಡಿಸುವುದು, ಒಬ್ಬಂಟಿಯಾಗಿ ತಿರುಗಾಡುವುದು ಕಷ್ಟ ಸಾಧ್ಯವಾಗಿದ್ದು, ಭಯದ ವಾತಾವರಣದಲ್ಲಿಯೇ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ನೆರವಾಗಬೇಕೆಂದು ಸೋಮಶೇಖರ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.