ಶೃಂಗೇರಿ: ‘ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಶೃಂಗೇರಿ ಪೊಲೀಸ್ ಪಿಎಸ್‌ಐ ಅಭಿಷೇಕ್ ಹೇಳಿದರು.
ಶೃಂಗೇರಿಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಮಾದಕ ವಸ್ತು ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ಅಂತರರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ವೀರಪ್ಪ ಗೌಡ (ಶಂಕರಚಾರ್ಯ ವೃತ್ತ)ದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿ ಅವರು ಮಾತನಾಡಿದರು.
ಉತ್ತಮ ಆಹಾರ ಪದ್ಧತಿ, ಸರಳ ಜೀವನ ನಡೆಸಬೇಕು. ಕೆಟ್ಟ ಅಭ್ಯಾಸಗಳಿಂದ ದೂರವಿದ್ದು, ಜೀವನದಲ್ಲಿ ಗುರಿ ಇಟ್ಟುಕೊಂಡರೆ ಮಾತ್ರ ಮನುಷ್ಯನ ಬದುಕು ಸಾರ್ಥಕ ಎಂದರು.
ಜೆಸಿಬಿಎಂ ಪಿಯು ಕಾಲೇಜಿನ ಪ್ರಾಂಶುಪಾಲ ಎ.ಜಿ.ಪ್ರಶಾಂತ್ ಮಾತನಾಡಿ, ‘ಮಾದಕ ವಸ್ತುಗಳ ಸೇವನೆ ಹಾನಿಕಾರಕ ಎಂಬ ಅರಿವು ಇದ್ದರೂ ಒತ್ತಡದಲ್ಲಿ ಸೇವಿಸುವರ ಸಂಖ್ಯೆ ಹೆಚ್ಚಾಗುತ್ತದೆ. ಯುವ ಪೀಳಿಗೆ ದೇಶದ ಸಂಪತ್ತು. ಬದುಕನ್ನು ಕುಟುಂಬಕ್ಕಾಗಿ, ದೇಶಕ್ಕಾಗಿ ಮೀಸಲಿಡಬೇಕು’ ಎಂದರು.
ಸಂಸ್ಕೃತ ಕಾಲೇಜಿನ ರಾಮಚಂದ್ರ ಮಾತನಾಡಿದರು.
ಪೊಲೀಸ್ ಇಲಾಖೆಯ ನಾಗರಾಜ್, ಜೆಸಿಬಿಎಂ ಕಾಲೇಜಿನ ಉಪನ್ಯಾಸಕರಾದ ಚಂದ್ರಕಲಾ, ಅಶ್ವಿನಿ, ಜೆಸಿಬಿಎಂ ಕಾಲೇಜು ಹಾಗೂ ರಾಜೀವ್ ಗಾಂಧಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.