ADVERTISEMENT

ಪ್ರತಿಭಟನೆಗೆ ಅಡಿಕೆ ಬೆಳೆಗಾರರ ಸಂಘ ಬೆಂಬಲ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:37 IST
Last Updated 8 ಜೂನ್ 2025, 15:37 IST
ತಲವಾನೆ ಪ್ರಕಾಶ್ 
ತಲವಾನೆ ಪ್ರಕಾಶ್    

ಬಾಳೆಹೊನ್ನೂರು: ಚಿಕ್ಕಮಗಳೂರಿನಲ್ಲಿ ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜೂನ್‌ 9ರಂದು ನಡೆಯುವ ಪ್ರತಿಭಟನೆಗೆ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಬೆಂಬಲವಿದೆ ಎಂದು ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಲೆನಾಡಿನ ಅಸ್ತಿತ್ವ ಮತ್ತು ಪರಿಸರ ಉಳಿಯಲು ಮಾಡುತ್ತಿರುವ ಪ್ರತಿಭಟನೆ ಇದಾಗಿದ್ದು, ಸರ್ಕಾರ ತಕ್ಷಣ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ. ಪ್ರಾಣಿ –ಮಾನವ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅರಣ್ಯ ಮತ್ತು ಕಂದಾಯ ಭೂಮಿಗಳ ಸ್ಪಷ್ಟ ಜಂಟಿ ಸರ್ವೆ ನಡೆಸಬೇಕು. ಸೆಕ್ಷನ್ 4 ವ್ಯಾಪ್ತಿಯಲ್ಲಿರುವ ಎಲ್ಲಾ ರೈತರ ಜಮೀನು, ಮನೆಗಳನ್ನು ಹೊರಗಿಡಬೇಕು. ಡೀಮ್ಡ್ ಫಾರೆಸ್ಟ್ ಪರಿಷ್ಕೃತ ಪಟ್ಟಿ ತಯಾರಿಸುವಾಗ ಗ್ರಾ.ಪಂ. ಮೂಲಕ ರೈತರ ಹಾಗೂ ಗ್ರಾಮಸ್ಥರ ಗಮನ ಸೆಳೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT